ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಪ್ರಧಾನಿಗೆ ಬರೆದ ಪತ್ರ ನೆನಪಿಸಿದ ಕಾಂಗ್ರೆಸ್

4 years ago

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲದ ಹಗರಣಗಳ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯುತ್ತೇನೆ ಎಂದ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಕಾಂಗ್ರೆಸ್ ಚಾಟಿ ಬೀಸಿದೆ.

ನೀವು ಪತ್ರ ಬರೆಯುವುದಿರಲಿ, ಈಗಾಗಲೇ ಪ್ರಧಾನಿ ಕಚೇರಿ ತಲುಪಿದ ಪತ್ರಗಳ ಬಗ್ಗೆ ಮಾತನಾಡಲು ಧೈರ್ಯವಿದೆಯೇ? ಎಂದು ಸಾಮಾಜಿಕ‌ ಜಾಲತಾಣಗಳ ಮೂಲಕ ಸಚಿವ ಅಶ್ವಥ್ ನಾರಾಯಣ ಅವರನ್ನು ಪ್ರಶ್ನಿಸಿದೆ.

ಕೈಲಾಗದವರು ಮೈ ಪರಚಿಕೊಂಡಂತಿದೆ Dr. Ashwath Narayan ಅವರ ಸ್ಥಿತಿ, ಹಗರಣಗಳ ಮೂಟೆ ಹೊತ್ತಿರುವ BJP Karnataka ತಮಗೆ ಅಂಟಿರುವ ಕಳಂಕವನ್ನು ಕಾಂಗ್ರೆಸ್ ಕಡೆ ಬೆರಳು ತೋರಿಸಿ ತೊಳೆದುಕೊಳ್ಳುತ್ತೇವೆ ಎಂಬ ಭ್ರಮೆಗೆ ಬಿದ್ದಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಸಚಿವ ಈಶ್ವರಪ್ಪ ಅವರು 40% ಕಮಿಷನ್ ಕೇಳುತ್ತಿದ್ದಾರೆ ಎಂದು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬೆಳಗಾವಿಯ ಸಂತೋಷ ಪಾಟೀಲ ಅವರು ಪ್ರಧಾನಿ ಮೋದಿ ಸೇರಿ ಹಲವು ಸಚಿವರಿಗೆ ಪತ್ರ ಮೂಲಕ ದೂರು ನೀಡಿದ್ದರು.‌ ಬಳಿಕ ತೀವ್ರ ವಿರೋಧದ ಮಧ್ಯೆ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಇದೀಗ ಈ ಹಗರಣವನ್ನು ಸಿದ್ದರಾಮಯ್ಯನವರ ವಿರುದ್ಧ ತಿರುಗಿಸಲು ಬಿಜೆಪಿ ಕೆಲ ನಾಯಕರು ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಜೆಪಿಗೆ ತಿರುಗೇಟು ನೀಡಿದೆ.

Leave a Reply