ಬೆಂಗಳೂರು: ಬಹು ಭಾಷಾ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಮಾಡಿ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿ, ತನಿಖೆ ನಡೆಸುತ್ತಿದ್ದ ಬೆಂಗಳೂರು ಪೊಲೀಸರಿಗೆ ಹ್ಯಾಕರ್ಸ್‌ಗಳ ಸುಳಿವು ಸಿಕ್ಕಿದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ನಟಿ ಪ್ರಿಯಾಂಕಾ ಮತ್ತು ನಟ ಉಪೇಂದ್ರ ಅವರ ಮೊಬೈಲ್ ಅನ್ನು ಹ್ಯಾಕ್ ಮಾಡಿರುವುದು ಬಿಹಾರ ಮೂಲದ ಗ್ಯಾಂಗ್ ಎಂದು ತಿಳಿದು ಬಂದಿದ್ದು, ವಂಚಕರ ಬಂಧನಕ್ಕಾಗಿ ಬೆಂಗಳೂರಿನ ಸದಾಶಿವನಗರ ಠಾಣೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.
ಪ್ರಕರಣ ನಡೆದು, 10 ದಿನದ ಬಳಿಕ ಬೆಂಗಳೂರಿನ ಸದಾಶಿವನಗರದ ಪೊಲೀಸರು ಹ್ಯಾಕರ್ ಮೂಲ ಪತ್ತೆ ಹಚ್ಚಿದ್ದಾರೆ. ಮೊದಲು ನಟಿ ಪ್ರಿಯಾಂಕಾ ಮೊಬೈಲ್ ಹ್ಯಾಕ್ ಮಾಡಿದ್ದರು. ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮೊಬೈಲ್ ಹ್ಯಾಕ್ ಆಗಿದೆ. ಹ್ಯಾಕ್ ಮಾಡಿ 4 ನಕಲಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು, ಬಳಿಕ ನಳಂದಾ ಬ್ಯಾಂಕ್‌ವೊಂದಕ್ಕೆ 1.65 ಲಕ್ಷ ಹಣ ವರ್ಗಾವಣೆ ಮಾಡಿಕೊಂಡು, ನಕಲಿ ಖಾತೆಯನ್ನ ಬ್ಲಾಕ್ ಮಾಡಿದ್ದಾರೆ ಎಂದು ಸೈಬರ್ ಪೊಲೀಸರು ಹೇಳಿದರು.
ಇದರ ಹಿಂದೆ ನಾಲ್ಕೈದು ಜನರ ಬಿಹಾರಿ ಗ್ಯಾಂಗ್ ಇರುವುದು ಬಯಲಾಗಿದೆ. ಬಿಹಾರಕ್ಕೆ ಒಂದು ಸ್ಪೆಷಲ್ ಟೀಂ ಕಳಿಸಲು ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ. ಬೆಂಗಳೂರು ಸೆಂಟ್ರಲ್ ಡಿಸಿಪಿ ಅಕ್ಷಯ್ ಮಚೀಂದ್ರ ಸೂಚನೆ ನೀಡಿದ್ದಾರೆ. ಹ್ಯಾಕ್ ಆಗುತ್ತಿದ್ದಂತೆ ಪ್ರಿಯಾಂಕಾ ಉಪೇಂದ್ರ ಅಲರ್ಟ್ ಆದರು. 10 ನಿಮಿಷ ಯಾಮಾರಿದ್ದರೂ ಬರೋಬ್ಬರಿ 10 ಲಕ್ಷ ಹಣ ಹ್ಯಾಕರ್ಸ್‌ಗಳ ಪಾಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದರು.




