ಸಾರಿಗೆ ನಿಗಮಗಳಲ್ಲಿ ಖಾಸಗೀ ಒಡೆತನದ ಎಲೆಕ್ಟ್ರಿಕ್ ವಾಹನಗಳ ಕಾರ್ಯಾಚರಣೆಗೆ ಸಿಐಟಿಯು ವಿರೋಧ
ಪರಿಸರ ಮತ್ತು ಮಾಲಿನ್ಯದ ದೃಷ್ಟಿಯಿಂದ ಎಲೆಕ್ಟ್ರಿಕ್ ಬಸ್ಸುಗಳನ್ನು ತರಲು ಸಿಐಟಿಯು ಬೆಂಬಲಿಸುತ್ತದೆ.
ಆದರೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಖಾಸಗೀ ಎಲೆಕ್ಟ್ರಿಕ್ ಬಸ್ಸುಗಳನ್ನು FAME – 2 ಯೋಜನೆಯಡಿಯಲ್ಲಿ ಸಾರಿಗೆ ನಿಗಮಗಳಲ್ಲಿ ಖಾಸಗೀ ಒಡೆತನದಲ್ಲಿ ಎಲೆಕ್ಟ್ರಿಕ್ ಬಸ್ಸುಗಳನ್ನು ಲೋಕಾರ್ಪಣೆ ಮಾಡುತ್ತಿರುವುದನ್ನು ಕರಾರಸಾನಿಗಮಗಳ ಫೆಡರೇಷನ್ (CITU) ವಿರೋಧಿಸುತ್ತದೆ.
ಸಾರಿಗೆ ನಿಗಮಗಳಲ್ಲಿ ಖಾಸಗೀ ಒಡೆತನದ ಎಲೆಕ್ಟ್ರಿಕ್ ವಾಹನಗಳನ್ನು ಕಾರ್ಯಾಚರಣೆ ಮಾಡುವ ಪ್ರಕ್ರಿಯೆ ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ದಾರಿಯಾಗುತ್ತದೆ. ಸಾರಿಗೆ ನಿಗಮಗಳ ಅಸ್ಥಿತ್ವಕ್ಕೆ ಧಕ್ಕೆಯಾಗುತ್ತದೆ.
ಸರ್ಕಾರದ ಇಂತಹ ನೀತಿಗಳಿಂದ ರಾಜ್ಯದ ಜನತೆ ಹಂತ- ಹಂತವಾಗಿ ಸಾರಿಗೆ ನಿಗಮಗಳು ಈಗ ನೀಡುತ್ತಿರುವ ಸೇವೆಗಳಿಂದ ವಂಚಿತರಾಗುತ್ತಾರೆ. ಪ್ರಯಾಣದ ದರವೂ ಕೂಡ ವಿಪರೀತವಾಗಿ ಹೆಚ್ಚಳವಾಗುತ್ತದೆ.
ಈ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳೇ ಎಲೆಕ್ಟ್ರಿಕ್ ಬಸ್ಸುಗಳನ್ನು ಓಡಿಸಬೇಕು. ಸಾರಿಗೆ ನಿಗಮಗಳನ್ನು ಉಳಿಸಬೇಕು ಮತ್ತು ಬೆಳೆಸಬೇಕೆಂದು ಒತ್ತಾಯಿಸುತ್ತೇವೆ.
ವಂದನೆಗಳೊಂದಿಗೆ,
H. D.ರೇವಪ್ಪ, ಅಧ್ಯಕ್ಷರು, 6363470433
ಡಾ. ಪ್ರಕಾಶ್ ಕೆ. ಉಪಾಧ್ಯಕ್ಷರು, .9448574389
H. S. ಮಂಜುನಾಥ್, ಪ್ರಧಾನ ಕಾರ್ಯದರ್ಶಿ.
9482520360
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ (CITU)*
ಸೂರಿ ಭವನ, ನಂ. 45,16 ನೇ ಕ್ರಾಸ್, ಸಂಪಂಗಿರಾಮನಗರ, ಬೆಂಗಳೂರು- 27.
ದಿನಾಂಕ: 20-3-2023




