ಬೆಂಗಳೂರು: ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿಸಿದ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳತಿ ಪವಿತ್ರಾ ಗೌಡ ಇದೀಗ ಖೈದಿ ನಂಬರ್ 6024.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಖೈದಿಯಾಗಿರುವ ಪವಿತ್ರಾ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರಿಗೆ ಜೈಲಿನಲ್ಲಿ ಡಿ ಬ್ಯಾರಕ್ ಸಿಕ್ಕಿದ್ದು,ಕೈದಿ ನಂಬರ್ 6024 ಸಂಖ್ಯೆಯನ್ನು ನೀಡಲಾಗಿದೆ. ಪ್ರಕರಣದ ಉಳಿದ ಆರೋಪಿಗಳನ್ನು ಜೈಲಿನ ಕ್ವಾರೆಂಟೈನ್ ಬ್ಯಾರಕ್ನಲ್ಲಿ ಇಡಲಾಗಿದೆ. ಎಲ್ಲಾ ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಮಹಿಳಾ ವಿಭಾಗದ ಡಿ ಬ್ಯಾರಕ್ ನಲ್ಲಿ ಸೆರೆವಾಸದಲ್ಲಿದ್ದಾರೆ. ಅವರು ಎರಡು ದಿನದಿಂದ ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿ 11ರ ವೇಳೆ ನಿದ್ರೆಗೆ ಜಾರಿದ್ದಾರೆ. ಆದರೆ ಸರಿಯಾಗಿ ನಿದ್ದೆ ಮಾಡದೆ ಆಗಾಗ ಎದ್ದು ಕುಳಿತು ಯೋಚನೆ ಮಾಡಿದ್ದಾರೆ. ಬೆಳಗ್ಗೆ 5 ಗಂಟೆಗೆ ಎದ್ದು ಜೈಲಿನ ಬ್ಯಾರಕ್ ಬಳಿ ವಾಕಿಂಗ್ ಮಾಡಿ ಜೈಲಿನ ಸಿಬ್ಬಂದಿ ನೀಡಿದ ಕಾಫಿ ಕುಡಿದು ದಿನಪತ್ರಿಕೆ ಓದಿದ ಅವರಿಗೆ ಜೈಲಿನ ಮೆನುವಿನಂತೆ ತಿಂಡಿಗೆ ಉಪ್ಪಿಟ್ಟು ನೀಡಲಾಗಿದೆ.
ಕೋರ್ಟ್ ನಲ್ಲಿ ವಿಚಾರಣೆ ಮುಗಿಸಿ ಪವಿತ್ರಾ ಪೊಲೀಸ್ ವ್ಯಾನ್ ಹತ್ತಿದಾಗ ಅವರನ್ನು ನೋಡಲು ಪುತ್ರಿ ಖುಷಿ ಗೌಡ ಆಗಮಿಸಿದ್ದು, ನೂಕುನುಗ್ಗಲಿನ ನಡುವೆ ತಾಯಿ ಜೊತೆ ಮಾತನಾಡಲು ಹರಸಾಹಸ ಪಡಬೇಕಾಯಿತು. ಪವಿತ್ರಾ ಗೌಡ ಅವರ ಕುಟುಂಬದ ಇತರೆ ಸದಸ್ಯರು ಕೂಡ ಪೊಲೀಸ್ ವ್ಯಾನ್ ಪಕ್ಕದಲ್ಲಿ ನಿಂತು ಮಾತನಾಡಿದ್ದರು. ಅನಂತರ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಪವಿತ್ರಾ ಗೌಡ ಮಗಳು ಮತ್ತು ತಾಯಿ ಸೇರಿದಂತೆ ಕುಟುಂಬದವರು ಭೇಟಿಯಾಗಿದ್ದಾರೆ.




