75ನೇ ಸ್ವಾತಂತ್ರ್ಯ  ಬಂದರೂ ದಲಿತರಿಗೆ ಇನ್ನು ಸಿಗಲಿಲ್ಲ  ಸಾಗುವಳಿ ಹಕ್ಕು  ಪತ್ರ

5 years ago

ಚಿತ್ರದುರ್ಗ: 75ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದರು  ದಲಿತರು, ಹಿಂದುಳಿದವರು SC/ST ಜನಸಮುದಾಯಗಳಿಗೆ ಬಗರ್ ಹುಕುಂ ಮತ್ತು  ಅರಣ್ಯ  ಭೂಮಿಯ ಹಕ್ಕು  ಪತ್ರಗಳು ಸಿಗದೆ ಜನ ಇನ್ನೂ ಪರದಾಡುವಂತಾಗಿದೆ ಎಂದು  ಶ್ರೀ ಬಸವನಾಗಿದೇವ ಸ್ವಾಮೀಜಿ  ಅಸಮಾಧಾನ ವ್ಯಕ್ತಪಡಿಸಿದರು.

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿಗೂ ದಲಿತರು ಬಗರ್ ಹುಕುಂ ಸಾಗುವಳಿ ಭೂಮಿಯ ಹಕ್ಕು  ಪತ್ರಗಳಿಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿಜಕ್ಕೂ  ಖೇದಕರ ಎಂದರು.

ಕರ್ನಾಟಕ ಭೂ ಹಕ್ಕುದಾರರ ವೇದಿಕೆ ರಾಜ್ಯ ಸಂಚಾಲಕ ಕೆ.ಬಿ.ರೂಪಾನಾಯ್ಕ್ ಮಾತನಾಡಿ, ಅರಣ್ಯ  ಭೂಮಿ ಮತ್ತು  ಬಗರ್ ಹುಕುಂ ಸಾಗುವಳಿಯ ಹಕ್ಕು  ಪತ್ರಕ್ಕಾಗಿ ಕೆಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು  ಬರಲಾಗಿದೆ. ಆದರೂ ಜನರಿಗೆ ಇನ್ನೂ ಹಕ್ಕು ಪತ್ರ ನೀಡದೆ ಅಧಿಕಾರಿಗಳು ಮತ್ತು  ರಾಜಕಾರಣಿಗಳು ನಿರ್ಲಕ್ಷ್ಯ  ವಹಿಸಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ  ಶಾಂತಿ & ಸೌಹಾರ್ದ  ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್  ಕುಮಾರ್ ಮಾತನಾಡಿ, ಅರಣ್ಯ  ಭೂಮಿಯ ಸಾಗುವಳಿ ಪತ್ರಗಳನ್ನು  2005ನೇ ಕಾಯ್ದೆ ಅನ್ವಯ ನೀಡಬೇಕಾಗುತ್ತದೆ. ಆದರೆ ಅಧಿಕಾರಿಗಳ ಬೇಜಾವಾಬ್ದಾರಿಯಿಂದಾಗಿ ಹಕ್ಕು  ಪತ್ರ  ಸಿಗದೆ ನಿರ್ಲಕ್ಷ್ಯವಹಿಸಲಾಗುತ್ತಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ಶ್ರೀನಿವಾಸ್, DSS ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಣ್ಣ, BSP ಜಿಲ್ಲಾಧ್ಯಕ್ಷ ವೆಂಕಟೇಶ್ ತಾಲ್ಲೂಕು  ಅಧ್ಯಕ್ಷ ಶಶಿಕುಮಾರ್, ಶೋಷಿತ ಸಮುದಾಯದ ಮುಖಂಡ ವೈ.ಕುಮಾರ್  ಮುಂತಾದವರು ಹಾಜರಿದ್ದರು.

Leave a Reply