ಬೆಂಗಳೂರು: 100 ಕೋಟಿ ಕೊವಿಡ್-19 ಲಸಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಹಲಸೂರು ರೆಫರಲ್ ಆಸ್ಪತ್ರೆಯಲ್ಲಿ ಕೊರೋನ ವಾರಿಯರ್ಸ್ ಗಳಾದ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಿಬ್ಬಂದಿಗೆ ಮಾಜಿ ಮೇಯರ್ ಗೌತಮ್ ಕುಮಾರ್ ಮತ್ತು ಬಿ.ಜೆ.ಪಿ. ರಾಜ್ಯ ಕಾರ್ಯದರ್ಶಿ ಮತ್ತು ನಗರ ಉಸ್ತುವಾರಿ ನವೀನ್ ಬೆಂಗಳೂರು ನಗರ ಬಿ.ಜೆ.ಪಿ. ಕಾರ್ಯದರ್ಶಿ ಯದು ಕುಮಾರ್ ಗೌಡ, ಜೋಗುಪಾಳ್ಯ ವಾರ್ಡ್ ಬಿ.ಜೆ.ಪಿ. ಅಧ್ಯಕ್ಷ ರವಿ ಮತ್ತು ಸ್ಥಳೀಯ ಬಿ.ಜೆ.ಪಿ. ಹಿರಿಯ ಮುಖಂಡರು ಸನ್ಮಾನಿಸಿದರು.
ಗೌತಮ್ ಕುಮಾರ್ ಮಾತನಾಡಿ, ಕೊರೋನ ಸಾಂಕ್ರಮಿಕ ರೋಗದ ವಿರುದ್ದ ಜನರ ಜೀವ ರಕ್ಷಣೆ ಕೊವಿಡ್-19 ಲಸಿಕೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರಮೋದಿಯವರು ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಉಚಿತವಾಗಿ ಕೊವಿಡ್-19 ಲಸಿಕೆ ಸಿಗಬೇಕು ಎಂದು ಲಸಿಕಾ ಅಭಿಯಾನ ಹಮ್ಮಿಕೊಂಡರು. ಕಳೆದ 300 ದಿನಗಳಲ್ಲಿ ದೇಶದಲ್ಲಿ 100 ಕೋಟಿ ಕೊವಿಡ್-19ಲಸಿಕೆ ಹಾಕಲಾಗಿದೆ ಎಂದರು.
ಕೊವಿಡ್-19 ಲಸಿಕಾ ಅಭಿಯಾನ ಯಶ್ವಸಿಯಾಗಲು ಸಹಕರಿಸಿದ ವೈದ್ಯರು, ಆರೋಗ್ಯ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಹೃತ್ವೂರ್ವಕ ಧನ್ಯವಾದಗಳು ಮತ್ತು ಇದೇ ಶುಭ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ ವೈದ್ಯರು, ದಾದಿಯರು ಮತ್ತು ಅಂಬುಲೆನ್ಸ್ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿಗೆ ಸನ್ಮಾನಿಸಿ, ಗೌರವಿಸಲಾಗಿದೆ ಎಂದರು.




