ಎಸ್.ಪಿ.ಬಿ ಸಾವಿರಾರು ಗೀತೆಗಳನ್ನು ಹಾಡಿ ಕನ್ನಡಿಗರ ಮನಗೆದ್ದಿದ್ದಾರೆ: ಎಸ್.ಎಂ.ಕೃಷ್ಣ

4 years ago

ಬೆಂಗಳೂರು: ಎಸ್.ಪಿ.ಬಾಲಸುಬ್ರಮಣ್ಯಂರವರು ಗಾಯನ ಕ್ಷೇತ್ರದ ಅಮೂಲ್ಯ ವಜ್ರ. ನನಗೂ ಸಂಗೀತ, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇದೆ. ರಾಮಕೃಷ್ಟ ಪರಮಹಂಸ, ವಿವೇಕಾನಂದರವರ ಆದರ್ಶಗಳನ್ನು ನನ್ನ ಜೀವನದಲ್ಲಿ ಆಳವಡಿಸಿಕೊಂಡೆ. ಎಸ್.ಪಿ.ಬಾಲಸುಬ್ರಮಣ್ಯಂ ಸಾವಿರಾರು ಗೀತೆಗಳನ್ನು ಹಾಡಿ ಕನ್ನಡಿಗರ ಮನ ಗೆದ್ದಿದಾರೆ ಎಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಹೇಳಿದರು.

ಮಲ್ಲೇಶ್ವರಂ ಚೌಡಯ್ಯ ಸ್ಮಾರಕ ಭವನದಲ್ಲಿ ಮಂದ್ರ ಕಲ್ಚರಲ್ ಫೌಂಡೇಷನ್ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಎಸ್.ಪಿ.ಬಾಲಸುಬ್ರಮಣ್ಯಂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತಾಡಿರು.

ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಪ್ರಶಸ್ತಿ ಪುರಸ್ಕೃತ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಭರಣ ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ಕಲಾವಿದ ಬಿ.ಕೆ.ಎಸ್.ವರ್ಮಾ ಹಾಗೂ ವೈದ್ಯ ಮದನ್, ಸಾರ್ವಜನಿಕ ಸಂರ್ಪಕ ಅಧಿಕಾರಿ ಎಂ.ಜಿ.ಜಯರಾಂ, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ್ ಶೆಣೈ, ಉದ್ಯಮಿ ಎಸ್.ವಿ.ವೆಂಕಟೇಶ್ ಮತ್ತು ಗಾಯಕ ಬಸವರಾಜ್ ಮಗಿರವರಿಗೆ ಎಸ್.ಪಿ.ಬಿ.ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಹಂಸಲೇಖ ಮಾತನಾಡಿ, ಮಂದ್ರ ಕಲ್ಚರಲ್ ಫೌಂಡೇಷನ್ ಕನ್ನಡ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಮೈಸೂರು ರಾಜಮನೆತನ ಅಪೂರ್ವ ಕೊಡುಗೆ ನೀಡಿದೆ. ಎಸ್.ಪಿ.ಬಿ. ಎಲ್ಲ ಧರ್ಮ, ವರ್ಗದವರ ಪ್ರೀತಿ ಗಳಿಸಿದ್ದರು. ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಸಂತೋಷದಾಯಕವಾಗಿದೆ. ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿ ಹುಟ್ಟುತ್ತೇನೆ ಎಂದು ಎಸ್.ಪಿ.ಬಿ.ಹೇಳುತ್ತಿದ್ದರು ಎಂದರು.

ಟಿ.ಎಸ್.ನಾಗಭರಣ ಮಾತನಾಡಿ ಎಸ್.ಪಿ.ಬಾಲಸುಬ್ರಮಣ್ಯಂರವರು ಸಂಗೀತ ಲೋಕದ ದಿಗ್ಗಜ. ಅವರ ಸ್ನೇಹ ಪಡೆದಿರುವುದು ಹೃದಯ ತುಂಬಿಬರುವ ಅದ್ಬುತ ಕ್ಷಣಗಳು. 50,000 ಹಾಡುಗಳ ಡಿಜಿಟಲ್ ಲೈಬರಿ ಸ್ಥಾಪನೆ ಮೂಲಕ ಕಂಪ್ಯೂಟರ್ ಗೆ ಅಳವಡಿಸಿದರೆ ಸಾರ್ವಜನಿಕರಿಗೆ ಅಧ್ಯಯನ ಮಾಡಲು ಸುಲಭವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಗೌತಮ್ ಕುಮಾರ್, ನಿವೃತ್ತ ಪೋಲಿಸ್ ಮಹಾ ನಿರ್ದೇಶಕ ಶಂಕರ್ ಬಿದರಿ, ಮಂದ್ರ ಕಲ್ಚರಲ್ ಫೌಂಡೇಷನ್ ಅಧ್ಯಕ್ಷ‍್ಯೆ ರಮ್ಯ ವಸಿಷ್ಟ ಹಾಗೂ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಮೊದಲಾದವರು ಹಾಜರಿದ್ದರು.

Leave a Reply