ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ 50 ವರ್ಷದ ಸಾರ್ಥಕ ಸಿನಿಮಾ ಬದುಕಿನ ಸಂಭ್ರಮ, ನಿರ್ದೇಶಕ ರತ್ನ ಗೌರವ
ಒಬ್ಬ ನಿರ್ದೇಶಕನ ಸಾಧನೆಯನ್ನು ಗುರುತಿಸುವುದು, ಅದಕ್ಕೆ ಮನ್ನಣೆ ನೀಡುವುದರ ಜೊತೆಗೆ ಅವರ ಚಿತ್ರೋತ್ಸವ ಮಾಡಿ ಸನ್ಮಾನಿಸುವುದು ಮಹತ್ತರ ಕೆಲಸ. ಒಂದು ವಾರದ ಅಚ್ಚುಕಟ್ಟಾದ ಕಾರ್ಯಕ್ರಮ. ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ 50 ವರ್ಷದ ಸಾರ್ಥಕ ಸಿನಿಮಾ ಬದುಕಿನ ಸಂಭ್ರಮ, ನಿರ್ದೇಶಕ ರತ್ನ ಗೌರವ! ಇಂತಹ ತೆರೆಮರೆಯ ತಂತ್ರಜ್ಞರ ಸಾಧನೆ ಗುರುತಿಸುವ ಕಾರ್ಯಕ್ರಮಗಳು ಇನ್ನೂ ಹೆಚ್ಚಚ್ಚು ಬರಲಿ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡರ ನಾಯಕತ್ವದಲ್ಲಿ ಶ್ಲಾಘನೀಯ ಸಮಾರಂಭ. ಧನ್ಯವಾದಗಳು. ಕನ್ನಡ ಚಿತ್ರರಂಗವನ್ನು ಬೆಂಬಲಿಸೋಣ.









