ಕಾರಿಗೆ ಕಾರಿನಿಂದ ಗುದ್ದಿ ಜಖಂ ಮಾಡಿ ಬೆದರಿಕೆ

3 years ago

ಬೆಂಗಳೂರು: ಪಿಸ್ತೂಲ್ ಹಿಡಿದು ಬಿಲ್ಡರೊಬ್ಬರು ಮನೆ ಮುಂಭಾಗ ನಿಲ್ಲಿಸಿದ್ದ ಕಾರಿಗೆ ಕಾರಿನಿಂದ ಗುದ್ದಿ ಜಖಂ ಮಾಡಿ ಬೆದರಿಕೆ ಹಾಕಿರುವ ಘಟನೆ ಕೆ.ಆರ್.ಪುರಂ ಚಿಕ್ಕಬಸವನಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಅ.28 ರಂದು ಮಧ್ಯರಾತ್ರಿ 1:30 ರ ವೇಳೆಗೆ ಕೆ.ಆರ್.ಪುರಂನ ಚಿಕ್ಕಬಸವನಪುರದಲ್ಲಿ ಮನೆ ಮುಂಭಾಗ ನಿಲ್ಲಿಸಿದ್ದ ಕಾರಿಗೆ ಕಾರಿನಿಂದ ಗುದ್ದಿ ಜಖಂ ಮಾಡಿ ನಾರಾಯಣ್ ಗೆ ಜೀವ ಬೆದರಿಕೆ ಹಾಕಿದ್ದಾರೆ.
ಬಿಲ್ಡರ್ ಕಾರ್ತೀಕ್ ರೆಡ್ಡಿ ಮತ್ತವರ ಗ್ಯಾಂಗ್ ನಾರಾಯಣ್ ಅವರ ಮನೆ ಮುಂದೆ ಬಿಯರ್ ಬಾಟಲ್ ಹೊಡೆದು ದಾಂಧಲೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಮನೆ ಮುಂಭಾಗದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಸರ್ಕಾರಿ ಜಮೀನು ಮಾರಾಟಕ್ಕೆ ಯತ್ನಿಸಿದ್ದರ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಜೀವ ಬೆದರಿಕೆ ಹಾಕಲಾಗಿದೆ. ದೂರುದಾರ ನಾರಾಯಣ ಮನೆ ಸಮೀಪ ಇರುವ ಜಮೀನು ಮಾರಾಟಕ್ಕೆ ಬಿಲ್ಡರ್ ಕಾರ್ತೀಕ್ ರೆಡ್ಡಿ ಯತ್ನಿಸಿದ್ದ. ಈ ವೇಳೆ ನಾರಾಯಣ್, ಕಾರ್ತೀಕ್ ರೆಡ್ಡಿ ಮಾರಾಟಕ್ಕೆ ಯತ್ನಿಸಿದ್ದ ಜಮೀನನಲ್ಲಿ ಒಂದು ಎಕರೆ ಸರ್ಕಾರಿ ಜಮೀನಿನ ಮಾಹಿತಿ ನೀಡಿದ್ದರು.
ಹೀಗಾಗಿ ಕಾರ್ತೀಕ್ ರೆಡ್ಡಿ ಅಂಡ್ ಗ್ಯಾಂಗ್ ಅವರ ಮನೆಯ ಮುಂದೆ ದಾಂಧಲೆ ನಡೆಸಿದ್ದಾರೆ. ಕಾರ್ತೀಕ್ ರೆಡ್ಡಿ ಮತ್ತವರ ತಂಡದ ವಿರುದ್ಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply