SDPI ನಾಯಂಡನಹಳ್ಳಿ ವಾರ್ಡ್ ಸಮಿತಿಯಿಂದ 17ನೇ ಸಂಸ್ಥಾಪನಾ ದಿನದ ಧ್ವಜಾರೋಹಣ
ಬೆಂಗಳೂರು: ಸುಳ್ಳು ಪ್ರಕರಣ, ಜೈಲು, ಅಕ್ರಮ ಬಂಧನದಿಂದ ಅಥವಾ ಲಾಠಿಗಳ ಮೂಲಕ ಈ ರಾಜಕೀಯ ಚಳುವಳಿಯನ್ನು ದಮನಿಸಬಹುದು ಎಂದು ಭಾವಿಸಿದರೆ ಅದು ಮೂರ್ಖತನ. ಈ ಹೋರಾಟದಿಂದ ಒಂದು ಇಂಚನ್ನು ಸಹ ಹಿಂದೆ ಸರಿಸಲು ಸಾಧ್ಯವಿಲ್ಲ ಎಂದು ಎಸ್ ಡಿ ಟಿ ಐ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನಾಯಂಡನಹಳ್ಳಿ ವಾರ್ಡ್ ಸಮಿತಿಯ ವತಿಯಿಂದ SDPI ಪಕ್ಷದ 17ನೇ ಸಂಸ್ಥಾಪನಾ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನಾಯಂಡನಹಳ್ಳಿ ವಾರ್ಡ್‌ನ ಪಕ್ಷದ ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು.
ಧ್ವಜಾರೋಹಣ ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ರವರು ನೆರವೇರಿಸಿದರು. ನಂತರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಘನತೆಯ ರಾಜಕೀಯ ಚಳವಳಿಗೆ ಹದಿನೇಳರ ಸಂಭ್ರಮ. ರಾಜಿಯಿಲ್ಲದ ಹೋರಾಟ ರಾಜಕೀಯಕ್ಕಾಗಿ ಎಸ್‌ಡಿಪಿಐ ಜೊತೆ ಕೈಜೋಡಿಸಿ ಎಂದು ಕರೆನೀಡಿದರು.
ನಮ್ಮ ಕಾರ್ಯಕರ್ತರು ಆರಂಭ ಕಾಲದಿಂದಲೇ ಹೋರಾಟ ರಂಗದಲ್ಲಿ ಮುಂಚೂಣಿಯಲ್ಲಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬೆಳೆಯುತ್ತಿರುವ ವಂಶವಾದ, ಕೋಮು ಧ್ರುವೀಕರಣ, ಹಕ್ಕು ನಿರಾಕರಣೆ ಮತ್ತು ದಬ್ಬಾಳಿಕೆಯಿಂದ ಜನತೆ ಬೇಸತ್ತು ಹೋಗಿರುವ ಈ ಸಂದರ್ಭದಲ್ಲಿ, SDPI ಪಕ್ಷವು ಸಂವಿಧಾನಬದ್ಧ ಹೋರಾಟದ ಮೂಲಕ ಭಯ ಮುಕ್ತ ಮತ್ತು ಹಸಿವು ಮುಕ್ತ ಸಮಾಜ ನಿರ್ಮಾಣದ ಕನಸನ್ನು ನೇರವೇರಿಸುತ್ತಿದೆ ಎಂದರು.
ಪಕ್ಷದ ತತ್ತ್ವ, ಧೃಢತೆ ಮತ್ತು ಸಮಾನತೆಯ ಮೌಲ್ಯಗಳನ್ನು ವಿಶ್ವಾಸದಿಂದ ಬೆಂಬಲಿಸುವ ಎಲ್ಲರಿಗೂ SDPI ಪಕ್ಷದ 17ನೇ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ರಾಷ್ಟ್ರದಾದ್ಯಾಂತ ದಲಿತ, ಅಲ್ಪಸಂಖ್ಯಾತ ಮತ್ತು ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಪಕ್ಷ ಹೋರಾಡುತ್ತಿರುವ ದೃಢ ಮನೋಭಾವ ಹೊಂದಿದೆ. ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಅವರನ್ನು ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಹೋರಾಟದ ವೇಳೆ ಕಿರುಕುಳ ನೀಡುವ ಉದ್ದೇಶದಿಂದ ಜೈಲಿನಲ್ಲಿ ಅಕ್ರಮವಾಗಿ ಬಂಧಿಸಿರುವ ಘಟನೆಯು ಫ್ಯಾಸಿಸ್ಟ್ ಶಕ್ತಿಗಳ ಹೆದರುವಿಕೆಯ ಪ್ರತಿಬಿಂಬವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಾರ್ಡ್ ಅಧ್ಯಕ್ಷ ಮೊಹಮ್ಮದ್ ನಯಾಜ್, ಕಾರ್ಯದರ್ಶಿ ಇನಾಯತ್ ಪಾಷ, ಸಮಿತಿ ಸದಸ್ಯರಾದ ಸೈಯದ್ ಪಾಷ, ಅಸ್ಗರ್ ಬೇಗ್, ಶೇಖ್ ಇನಾಯತ್, ಝಬಿಉಲ್ಲಾ ಖಾನ್ ಹಾಗೂ ಸ್ಥಳೀಯ ನಾಯಕರು, ಕಾರ್ಯಕರ್ತರು, ಮಹಿಳಾ ಚಳವಳಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.




