ಇಂದಿರಾಗಾಂಧಿ ವಸತಿ ಶಾಲೆಗೆ ದಿಢೀರನೆ ಹೋಗಿದ್ದೆ: ಬಿ.ವೈ.ರಾಘವೇಂದ್ರ

3 years ago

#BYRaghavendra #sudden #visit #IndiraGandhi #school

ಶಿವಮೊಗ್ಗ: ನಾನು ತುಂಬಾ ಇಷ್ಟಪಟ್ಟು ಮಾಡುವ ಕೆಲಸ ಇದು, ದಿಢೀರನೆ ಯಾವುದೋ ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ಮಾತಾಡುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇವತ್ತು ಹೊಸನಗರದ ಹತ್ತಿರವಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಹಾಗೆಯೇ ದಿಢೀರನೆ ಹೋಗಿದ್ದೆ. ಎಷ್ಟು ಚುರುಕಾಗಿರುವ ಮಕ್ಕಳು! ಅವರ ಆರೋಗ್ಯ, ಅವರಿಗಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿಕೊಂಡೆ ಎಂದು ಹೇಳಿದ್ದಾರೆ.

ಒಂದು ಹೊಸ ಕಟ್ಟಡದ ಅಗತ್ಯ ತುರ್ತಾಗಿರುವುದು  ನನ್ನ ಗಮನಕ್ಕೆ ಬಂತು. ಆದಷ್ಟು ಬೇಗ ಅದನ್ನು ಒದಗಿಸಿಕೊಡುವ ಭರವಸೆ ಕೊಟ್ಟು ಬಂದಿದ್ದೇನೆ. ಇನ್ನು ಈ ಭರವಸೆ ಸದಾ ನನ್ನ ಹೆಗಲ ಮೇಲಿರುವ ಜವಾಬ್ದಾರಿ ಎಂದಿದ್ದಾರೆ.

Leave a Reply