ಶಿವಮೊಗ್ಗ: ಶಿವಮೊಗ್ಗದಲ್ಲಿ ಶರಾವತಿ ಪ್ರಕರಣ ಮತ್ತು ಅರಣ್ಯ ಪ್ರದೇಶ ಗ್ರ್ಯಾಂಟ್ ನೀಡುವ ಪ್ರಕರಣಗಳು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿವೆ. ಇದಲ್ಲದೆ, ರಾಜ್ಯದಲ್ಲಿ 2000 ಹೆಚ್ಚುವರಿ ಪರವಾನಿಗೆ ಸರ್ವೇಯರ್ ಗಳನ್ನು (ಭೂ ಮಾಪಕರು) ಡಿಸೆಂಬರ್ ತಿಂಗಳ ಒಳಗಾಗಿ ನೇಮಕ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪಕ್ಕದ ಜಿಲ್ಲೆಗಳಿಂದಲೂ ಜಂಟಿ ಸಮೀಕ್ಷೆಗಾಗಿ ಅಗತ್ಯ ಸಂಖ್ಯೆಯ ಸರ್ವೇಯರ್ ಗಳನ್ನು ಒದಗಿಸುವಂತೆ ಸಚಿವರು ಸರ್ವೆ ಆಯುಕ್ತರಿಗೆ ಸೂಚನೆ ನೀಡಿದರು.
ಇದಲ್ಲದೇ 354 ಸರ್ಕಾರಿ ಭೂಮಾಪಕರನ್ನು ಮತ್ತು 1800 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಕ್ಕೆ ಅವಶ್ಯಕ ಕ್ರಮವಹಿಸಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.




