ನಮಸ್ಕಾರ. ಛಂದ ಪುಸ್ತಕ ಎರಡು ಹೊಸ ಅನುವಾದದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಈ ಭಾನುವಾರ ಬೆಳಿಗ್ಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದೆ. ಈ ಎರಡೂ ಪುಸ್ತಕಗಳು ನೇರವಾಗಿ ಮೂಲಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳು ಎಂಬುದು ನಮ್ಮ ಮೊದಲ ಹೆಮ್ಮೆಯಾದರೆ, ಇಬ್ಬರೂ ಅನುವಾದಕರ ಮೊದಲ ಕೃತಿ ಎಂಬುದು ಎರಡನೆಯ ಹೆಮ್ಮೆ. ಯಾವತ್ತೂ ಹೊಸತರ ಹುಡುಕಾಟದಲ್ಲಿ ನಿರತವಾಗಿರುವ ಛಂದ ಬಳಗಕ್ಕೆ ಹೊಸ ಅನುವಾದಕರ ಸೇರ್ಪಡೆ ಅಭಿಮಾನದ ಸಂಗತಿ.
- ಬಾಡಿಗೆದಾರರು ಇಲ್ಲದೆ ಖಾಲಿ ಇರುವ ಬಿಎಂಟಿಸಿ ಕಟ್ಟಡಗಳ ಕಡೆ ಗಮನ ಹರಿಸಿ
- ಮಾದಪಟ್ಟಣದ ಕ್ವಾರಿ ದುರಂತಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಆರ್.ಅಶೋಕ
- ಧಾರವಾಡ ರಂಗಾಯಣದಿಂದ ‘ಸ್ವಾತಂತ್ರ್ಯದ ಓಟ’ ನಾಟಕ ಪ್ರದರ್ಶನ
- ಸಿಲ್ವರ್ ಪ್ಲಾಂಟ್ನಲ್ಲಿ ಅಗ್ನಿ ಸುರಕ್ಷತಾ ಅಣಕು ಪ್ರದರ್ಶನ
- ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಮೇವು ಸಂಗ್ರಹಣೆ ಕಡ್ಡಾಯ
ಮೊದಲನೆಯ ಜರ್ಮನ್ ಅನುವಾದದ ಪುಸ್ತಕದ ಕುರಿತು ಈಗಾಗಲೇ ನಿಮ್ಮೊಡನೆ ವಿವರಗಳನ್ನು ಹಂಚಿಕೊಂಡಿರುವೆ. ಮತ್ತೊಂದು ಕೃತಿಯು ಅಪೂರ್ವ ಅನುಭವ ಕಥನವಾಗಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ್ ಸೀಮೆಯಲ್ಲಿ ನಿರಂತರವಾಗಿ ನಡೆದ ನಕ್ಸಲ್ ಚಳುವಳಿಯ ಹತ್ತಾರು ಆಯಾಮಗಳನ್ನು ಮೂರು ವರ್ಷ ಸತತ ಅವರೊಂದಿಗೆ ಒಡನಾಡಿದ ಅನುಭವದಿಂದ ಲೇಖಕರು ಈ ಕೃತಿಯನ್ನು ರಚಿಸಿದ್ದಾರೆ. ಹಿಂದಿಯಲ್ಲಿ ಆಶುತೋಷ್ ಭಾರದ್ವಾಜ್ ಬರೆದ ಈ ಮಹತ್ವದ ಕೃತಿಯನ್ನು ಕನ್ನಡಕ್ಕೆ ಸೊಗಸಾಗಿ ಕಾರ್ತಿಕ್ ಆರ್ ಅನುವಾದಿಸಿದ್ದಾನೆ.
ಕನ್ನಡ ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೊಡುಗೆಯನ್ನು ಕೊಟ್ಟ ಬಂಜಗೆರೆ ಜಯಪ್ರಕಾಶ್ ಪುಸ್ತಕ ಬಿಡುಗಡೆ ಮಾಡಿ ಮಾತಾಡುತ್ತಾರೆ. ಜ.ನಾ. ತೇಜಶ್ರೀ ಮತ್ತು ವಿಕ್ರಮ ವಿಸಾಜಿಯವರು ಕೃತಿಗಳ ಕುರಿತು ಮಾತಾಡಲಿದ್ದಾರೆ.

ಈ ಸಲದ ಕಾರ್ಯಕ್ರಮದಲ್ಲಿ ಹಿಂದಿ ಪುಸ್ತಕದ ಲೇಖಕ ಆಶುತೋಷ್ ಭಾರದ್ವಾಜ್ ನಮ್ಮೊಂದಿಗೆ ಇರುತ್ತಾರೆ. ಅತ್ಯುತ್ತಮ ವಾಗ್ಮಿ ಎಂದು ಹೆಸರುವಾಸಿಯಾದ ಆಶುತೋಷ್ ಮಾತುಗಳನ್ನು ನೀವು ಕೇಳಬೇಕು.

ಮಾಕ್ಸ್ ಮ್ಯುಲ್ಲರ್ ಭವನದ ಅಧ್ಯಕ್ಷರಾದ ಮಿಶಯೆಲ್ ಹೈನ್‌ಸ್ಟ್ ಅವರು ಜರ್ಮನ್ ಮತ್ತು ಕನ್ನಡ ಭಾಷೆಗಳ ಸಂಬಂಧ ಬೆಸೆಯಲು ಅವರು ಹಮ್ಮಿಕೊಂಡ ಯೋಜನೆಗಳನ್ನು ತಿಳಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ನೀವೂ ಜೊತೆಯಾದರೆ ನಮ್ಮ ಹೆಮ್ಮೆ ಇಮ್ಮಡಿಸುತ್ತದೆ.
ಈ ಸುಂದರ ಆಹ್ವಾನ ಪತ್ರಿಕೆಯನ್ನು ಕಿರಣ್ ಮಾಡಾಳು ರಚಿಸಿದ್ದಾರೆ.
– ವಸುಧೇಂದ್ರ, ಬರಹಗಾರರು




