ಬೆಂಗಳೂರು: ಕಾಂಗ್ರೆಸ್ ಪಕ್ಷ ಸ್ವಾತಂತ್ಯ್ರ ಹೋರಾಟದಲ್ಲಿ ಭಾಗವಹಿಸಿದ ಜಾತ್ಯತೀತ ತತ್ವ ಸಿದ್ದಾಂತವುಳ್ಳ ಮತ್ತು ಬಡವರ ಪರ ಕಾಳಜಿ ಇರುವ ಪಕ್ಷ. ರಾಷ್ಟ್ರ ರಾಜಕೀಯದಲ್ಲಿ ತತ್ವ, ನಿಷ್ಠೆ, ಸಿದ್ದಾಂತಗಳಿಗೆ ಕಟಿಬದ್ದರಾಗಿ ಹಗಲಿರುಳು ರಾಷ್ಟದ ಜಾತ್ಯತೀತ ಸಿದ್ದಾಂತಕ್ಕಾಗಿ ಶ್ರಮಿಸುತ್ತಿರುವ ಬಿ.ಕೆ.ಹರಿಪ್ರಸಾದ್ ರವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸಬೇಕು ಎಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.
ಕೊರೋನ ಸಾಂಕ್ರಮಿಕ ರೋಗ ಸಂದರ್ಭದಲ್ಲಿ ರಕ್ತದಾನಿಗಳ ಅವ್ಯಶಕತೆ ಇದೆ. ಅದ್ದರಿಂದ ಆಯೋಜಿಸಲಾಗಿದೆ. ಯುವಕರಿಗೆ ಸ್ಪೂರ್ತಿಯಾಗಿರುವ ಬಿ.ಕೆ.ಹರಿಪ್ರಸಾದ್ ರವರ ಸಾಮಾಜಿಕ ಚಿಂತನೆಗಳು, ಹೋರಾಟಗಳು ನಮಗೆ ಮಾರ್ಗದರ್ಶನ ಎಂದರು.
ಮಲ್ಲೇಶ್ವರಂ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಕಾಂಗ್ರೆಸ್ ಪಕ್ಷ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಅಂಧ ಗಾಯಕರಿಗೆ ವಾಕಿಂಗ್ ಸ್ಟಿಕ್ ವಿತರಣೆ ಕಾರ್ಯಕ್ರಮವನ್ನು ಮಲ್ಲೇಶ್ವರಂ ಹವ್ಯಕ ಭವನದಲ್ಲಿ ಆಯೋಜಿಸಲಾಗಿತ್ತು.
ಮಾಜಿ ಮಹಾಪೌರ ಜೆ.ಹುಚ್ಚಪ್ಪ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಂಜುಳನಾಯ್ಡು ಮತ್ತು ಮಾಜಿ ಮಹಾನಗರ ಪಾಲಿಕೆ ಸದಸ್ಯ ಹೆಚ್.ಮಂಜುನಾಥ್, ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ್ಯೆ ವಿಮಲ ವೆಂಕಟ್, ಮಹಿಳಾ ಕಾಂಗ್ರೆಸ್ ನಾಯಕಿ ಉಮಾ ಬಾಯಿ ಮತ್ತು ಯುವ ಕಾಂಗ್ರೆಸ್ ಪಕ್ಷದ ಹೇಮಂತ್ ಗೌಡ, ಅತಿರಥ್ ಮೊದಲಾದವರು ಭಾಗವಹಿಸಿದ್ದರು.



