ಬಿಜೆಪಿಗರು ತಮಗೆ ತಲೆ ಇದೆಯಾ ಎಂಬುದನ್ನು ಒಬ್ಬ ಒಳ್ಳೆ ಡಾಕ್ಟರಿಗೆ ತೋರಿಸಬೇಕು

3 years ago

ಹತ್ತು ಕೆಜಿ ಅಕ್ಕಿ ಕೊಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಅನ್ನುವ ಬಿಜೆಪಿಗಳು ತಮಗೆ ತಲೆ ಇದೆಯಾ ಎಂಬುದನ್ನು ಒಬ್ಬ ಒಳ್ಳೆ ಡಾಕ್ಟರಿಗೆ ತೋರಿಸಬೇಕು. ಅಲ್ರಯ್ಯಾ ರೈತ ಬೆಳದ ಅಕ್ಕಿ ಖರೀದಿ ಮಾಡಿ ಕೇಂದ್ರದ ಅಕ್ಕಿ ರಾಜ್ಯದ ಅಕ್ಕಿ ಅಂತ ನೌಟಂಕಿ ಮಾಡುತ್ತಾ ಇರೋ ಸ್ಟಾಕ್ ಅನ್ನು ಸರಕಾರ ದುಡ್ಡು ಕೊಟ್ಟರೂ ಈ ನಾಡಿನ ಬಡವನಿಗೆ ಕೊಡಲಾರೆ ಅಂತ ಹಲಕಟಗಿರಿ ಮಾಡ್ತಿರೋದು ನೀವು. ಸ್ಟಾಕ್ ಇಟ್ಟುಕೊಂಡು ಮಾನ್ಸೂನ್ ವಿಫಲವಾದರೆ, ಬರ ಬಿದ್ದರೆ ಅಕ್ಕಿಯ ಬೆಲೆ ಏರದಂತೆ ತಡೆಯಲು ಓಪನ್ ಮಾರ್ಕೆಟ್ಟಿಗೆ ಅಕ್ಕಿ ಕೊಟ್ಟು ಬೆಲೆ ನಿಯಂತ್ರಣ ಮಾಡಬೇಕು ಆದ್ದರಿಂದ ಕೊಡಲಾಗದು ಅಂತ ಕಿವಿಯಲ್ಲಿ ಕಮಲ ಇಟ್ಟುಕೊಂಡ ಹಾಫ್ ಬುದ್ಧಿಜೀವಿಗಳು ಹೇಳ್ತಾವೆ. ಮಾರುಕಟ್ಟೆಯ ಗ್ರಾಹಕರ ಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿರುವ ಬಡವರಿಗೆ ಅನ್ನ ಭಾಗ್ಯದ ಅಕ್ಕಿ ಸಿಕ್ಕು ಬಿಟ್ಟರೆ ಡಿಮ್ಯಾಂಡ್ ತಂತಾನೇ ಕಡಿಮೆ ಆಗುವುದಿಲ್ಲವೇ ? ಆ ಮೂಲಕ ಬೆಲೆ ಸರಳವಾಗಿಯೇ ನಿಯಂತ್ರಣಕ್ಕೆ ಬರೋದಿಲ್ಲವೇ ?

ಅದಿರಲಿ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿ ಆಗುತ್ತದೆ ಅಂತ ಲಬೋ ಲಬೋ ಬೊಂಬಡಾ ಬಜಾಯಿಸಿದ ಬಿಜೆಪಿ ಈಗ ಇವರ ಅಭಿಪ್ರಾಯದಂತೆ ಬೊಕ್ಕಸ ಖಾಲಿ ಆಗುವಂತ ಗ್ಯಾರಂಟಿ ಯೋಜನೆ ಹಿಂಪಡೆಯಿರಿ ಅಂತ ಪ್ರತಿಭಟನೆ ಮಾಡಬೇಕಾ ಅಥವಾ ಗ್ಯಾರಂಟಿ ಯೋಜನೆ ಕೊಡಲೇಬೇಕು ಅಂತ ಪ್ರತಿಭಟನೆ ಮಾಡಬೇಕಾ ? ನಿಮಗೊಂದು ಸ್ಥಿರವಾದ ಯೋಚನೆ ಮತ್ತು ನಿಲುವು ಅನ್ನೋದು ಇದೆಯಾ ?

ಮೋದಿ ಸರಕಾರದೊಡನೆ ಚರ್ಚೆ ಮಾಡಿ ಯೋಜನೆ ಘೋಷಣೆ ಮಾಡಬೇಕಿತ್ತು, ಕೇಂದ್ರದ ಅಕ್ಕಿ ಮೇಲೆ ನೀವೇನು ಯೋಜನೆ ರೂಪಿಸುವುದು ಇತ್ಯಾದಿ ಚಿಲ್ಲರೆ ಮಾತುಗಳಿಗೆ ಅರ್ಥವೇನಾದರೂ ಇದೆಯಾ ಅಂತ ? ಮೋದಿ ಈ ದೇಶದ ಚಕ್ರವರ್ತಿಯೇ ? ಕೇಂದ್ರ ಸರಕಾರದ ಅಡಿಯಾಳುಗಳೇ ರಾಜ್ಯಗಳು ? ರಾಜ್ಯಗಳು ಕೊಟ್ಟ ಹಣದ ಮೇಲೆ ಕೇಂದ್ರ ಸರಕಾರ ನಡೆಯುತ್ತದೆ. ಆದಾಯ ತೆರಿಗೆ, ಜಿ ಎಸ್ ಟಿ ಇತ್ಯಾದಿ ಕೇಂದ್ರದ ಆದಾಯಗಳೂ ಸಹ ರಾಜ್ಯಗಳಿಂದಲೇ ಹೋಗಬೇಕು. ಹತ್ತು ನಯಾ ಪೈಸೆ ಸ್ವಂತದ ಆದಾಯ ಇಲ್ಲದ ಕೇಂದ್ರ ಸರಕಾರಕ್ಕೆ ಈ ಒಣ ಧಿಮಾಕು ಏಕೆ ?

ಅದಿರಲಿ ಕೆಲ ಬಿಜೆಪಿ ಭಡವಗಳು ಬಿಜೆಪಿ ಅಕ್ಕಿಯನ್ನು ಕಾಂಗ್ರೆಸ್ಸಿನ ಸರಕಾರಕ್ಕೆ ಯಾಕೆ ಕೊಡಬೇಕು ಅನ್ನುವ ಅರ್ಥದಲ್ಲಿ ಮಾತಾಡುತ್ತಿವೆ. ಅಕ್ಕಿ ಬಿಜೆಪಿಯದೂ ಅಲ್ಲ, ಕಾಂಗ್ರೆಸ್ಸಿನದೂ ಅಲ್ಲ, ಕೇಂದ್ರದ್ದೂ ಅಲ್ಲ, ರಾಜ್ಯದ್ದೂ ಅಲ್ಲ. ಅದು ರೈತನ ಅಕ್ಕಿ. ಹಸಿದವರ ಪಾಲಿನ ಅಕ್ಕಿ. ಬಡವನ ತಟ್ಟೆಗೆ ಅನ್ನವನ್ನು ತಲುಪಿಸುವುದು ಬಿಜೆಪಿ ಕಾಂಗ್ರೆಸ್ಸು ಕೇಂದ್ರ ರಾಜ್ಯ ಮುನಿಸಿಪಾಲಿಟಿ ಗ್ರಾಮ ಪಂಚಾಯಿತಿ ಎಲ್ಲರ ಕರ್ತವ್ಯ.

ತಮ್ಮ ಗೋಡೌನಿನಲ್ಲಿ ಅಕ್ಕಿ ಇಟ್ಟುಕೊಂಡು, ದುಡ್ಡು ಕೊಡುತ್ತೇವೆ ಅಂದರೂ ರಾಜ್ಯಗಳಿಗೆ ಕೊಡದೆ ಬಡವರಿಗೆ ನೀವು ಯಾಕೆ ಕೊಟ್ಟಿಲ್ಲ ಅಂತ ಪ್ರತಿಭಟನೆ ಮಾಡುವುದು ನೀಚತನದ ಪರಮಾವಧಿ.

– ಡಾ.ಬಸವರಾಜ್ ಇಟ್ನಾಳ್, ಹಿರಿಯ ಪತ್ರಕರ್ತರು

Leave a Reply