ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಅದೆಷ್ಟು ಕೋಟಿಗೆ ಮಾರಿಕೊಂಡಿದೆ?: ಕೆಪಿಸಿಸಿ

2 years ago

#BJP #sold #post #state #president #crores #KPCC

ಬೆಂಗಳೂರು: ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿರೋಧ ಪಕ್ಷದ ನಾಯಕ! ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯ ಆಯ್ಕೆಯಾಗಿದ್ದು ಬಿಜೆಪಿ ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ನಿದರ್ಶನ ಎಂದು ಕೆಪಿಸಿಸಿ ವಾಗ್ದಾಳಿ ನಡೆಸಿದೆ.

ಬಿಜೆಪಿ ಆರ್.ಅಶೋಕ್ ಅವರನ್ನು ವಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ದಾಳಿ ನಡೆಸಿದರುವ ಕೆಪಿಸಿಸಿ, Siddaramaiah, DK Shivakumar ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ತಂದು ಕೂರಿಸಿದೆ ಬಿಜೆಪಿ! ರಾಜ್ಯಕ್ಕೆ ವಿರೋಧ ಪಕ್ಷದ ನಾಯಕನನ್ನು ಕೊಡಿ ಎಂದರೆ ವಿರೋಧ ಪಕ್ಷವನ್ನೇ ವಿರೋಧಿಸುವ ನಾಯಕರನ್ನು ಕೊಡುತ್ತಿದೆ BJP Karnataka ! ಎಂದು ಕಾಲೆಳೆದಿದೆ.

ಯಾವುದೇ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೂ ಕಿತ್ತಾಡದಷ್ಟು ಬಿಜೆಪಿಯ ಕಿತ್ತಾಟ ಜೋರಾಗಿದೆ. ಬಿಜೆಪಿ ನಾಯಕರು ಸೇರುವ ಜಾಗದಲ್ಲಿ ಕೋಲು, ದೊಣ್ಣೆ ಹಾಗೂ ಇತರೆ ಯಾವುದೇ ಆಯುಧವಾಗಿ ಬಳಸಬಹುದಾದ ವಸ್ತುಗಳನ್ನು ದೊರಕದಂತೆ ನೋಡಕೊಳ್ಳಬೇಕು. ಅಕಸ್ಮಾತ್ ಹೊಡೆದಾಡಿಕೊಂಡರೆ ಆಸ್ಪತ್ರೆಗಳಲ್ಲಿ ನೂಕುನುಗ್ಗಲಾಗುವ ಸಾಧ್ಯತೆ ಇರುತ್ತದೆ! ಎಂದಿದೆ.

ಸಿಎಂ ಹುದ್ದೆಯನ್ನು ಬಿಜೆಪಿ ₹ 2,500 ಕೋಟಿಗೆ ಮಾರಾಟ ಮಾಡಿದ ಸತ್ಯವನ್ನು ಹೊರಗೆಡವಿದ್ದ ಯತ್ನಾಳ್ ಅವರನ್ನು ಖರೀದಿಸಲು ಯಾರೋ ಹೋಗಿದ್ದರಂತೆ. ಯತ್ನಾಳ್ ರ ಖರೀದಿಗೆ ಹೋದವರು ಯಾರು BJP Karnataka? ಯಾವ ವ್ಯವಹಾರ ಕುದುರಿಸುವುದಕ್ಕೆ? ಹೈಕಮಾಂಡ್ ಕಡೆಯ ಏಜೆಂಟರಾ? ವಿಜಯೇಂದ್ರ ಕಡೆಯ ಏಜೆಂಟರಾ? “ವಿರೋಧ ಪಕ್ಷದ ನಾಯಕ” ಹುದ್ದೆಯನ್ನು ಎಷ್ಟಕ್ಕೆ ಬಿಕರಿಗೆ ಇಟ್ಟಿದೆ ಬಿಜೆಪಿ? ಎಂದು ಪ್ರಶ್ನಿಸಿದೆ.

ಚುನಾವಣೆ ಮುಗಿದು, ಸರ್ಕಾರ ರಚನೆಯಾಗಿ 6 ತಿಂಗಳು ಕಳೆದ ಮೇಲೆ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಜ್ಞಾನೋದಯವಾದಂತಿದೆ! ಈ ವಿಳಂಬಕ್ಕೆ ವ್ಯವಹಾರ ಕುದುರದಿರುವುದೇ ಕಾರಣವೇ BJP Karnataka? ಎಂದಿದೆ.

ವಿಪಕ್ಷ ನಾಯಕನ ಸ್ಥಾನಕ್ಕೆ ಇರುವ ಹರಾಜಿನ ಬೆಲೆ ಇದುವರೆಗೂ ಬಿಜೆಪಿಯ ಬಂಡಾಯ ನಾಯಕರು ಬಹಿರಂಗ ಪಡಿಸಿಲ್ಲ! ಮೊದಲು ಬಹಿರಂಗ ಪಡಿಸುವ ಬಿಜೆಪಿಯ ಬಂಡಾಯ ನಾಯಕರಿಗೆ ಕಾಂಗ್ರೆಸ್ ಪಕ್ಷದಿಂದ ಬಹುಮಾನ ನೀಡಲಾಗುವುದು! BSY ಮತ್ತು ಸಂತೋಷ್ ಗುಂಪುಗಳಿಗೆ ಮಾಹಿತಿ ನೀಡದೆ ಗೌಪ್ಯತೆ ಕಾಪಾಡಲಾಗುವುದು! ಎಂದು ಹೇಳಿದೆ.

ಹಿಂದೆ ಸಿಎಂ ಹುದ್ದೆಯನ್ನು ₹ 2,500 ಕೋಟಿಗೆ, ಮಂತ್ರಿಗಿರಿಯನ್ನು ₹ 100 ಕೋಟಿಗೆ ಮಾರಿಕೊಂಡಿದ್ದ ಬಿಜೆಪಿ ಈಗ ರಾಜ್ಯಾಧ್ಯಕ್ಷ ಹುದ್ದೆಯನ್ನು ಅದೆಷ್ಟು ಕೋಟಿಗೆ ಮಾರಿಕೊಂಡಿದೆ ಎನ್ನುವುದನ್ನು Basanagouda Patil Yatnal ಅವರೇ ಬಹಿರಂಗಪಡಿಸಬೇಕು! ಹಾಗೆಯೇ ಇಂದು ವಿಪಕ್ಷ ನಾಯಕನ ಹುದ್ದೆಯ ಹರಾಜಿನಲ್ಲಿ ಎಷ್ಟು ಸಂಪಾದನೆಯಾಗುವ ನಿರೀಕ್ಷೆ ಇದೆ BJP Karnataka? ಎಂದಿದೆ.

ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇ ಬಿಜೆಪಿಯ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅರ್ಹತೆಯೇ? ಈ ಆಯ್ಕೆ ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಆಗಿದ್ದೋ, ಜೆಡಿಎಸ್ ಶಾಸಕರ ಅಭಿಪ್ರಾಯದ ಆಧಾರದಲ್ಲಿ ಆಗಿದ್ದೋ, ಬಿಜೆಪಿ ಶಾಸಕರ ಅಭಿಪ್ರಾಯದಿಂದ ಆಗಿದ್ದೋ BJP Karnataka? ಎಂದು ಕೇಳಿದೆ.

ಚಹಾ ಕುಡಿಯಲು ಹೋದ Basanagouda Patil Yatnal ಹಾಗೂ ರಮೇಶ್ ಜಾರಕಿಹೊಳಿ ವಾಪಸ್ ಬಂದರಾ BJP Karnataka ?? ಬಿಜೆಪಿಯಲ್ಲಿ ಚಹಾ ಕುಡಿಯುವವರು ಯಾರು, ಹಾಲು ಕುಡಿಯುವವರು ಯಾರು, ಹಾಲಾಹಲ ಕುಡಿಯುವವರು ಯಾರು ಎಂಬುದು ಸ್ವತಃ ಬಿಜೆಪಿಗೇ ತಿಳಿದಂತಿಲ್ಲ.! ಎಂದು ಕಾಲೆಳೆದಿದೆ.

Leave a Reply