ಬೆಂಗಳೂರು: ಕಾಂಗ್ರೆಸ್ ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ವಿಭಾಗದ ವತಿಯಿಂದ ಮಹಾತ್ಮ ಜ್ಯೋತಿ ಬಾಪುಲೆ ರವರ ಹುಟ್ಟುಹಬ್ದ ಸಮಾರಂಭ ನಡೆಯಿತು.
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಹೇಮಂತ್ ರವರು, ಪದಾಧಿಕಾರಿಗಳಾದ ನಾರಾಯಣ್ ಶೆಟ್ಟಿ,ಶಮಂತ್, ರವಿಕುಮಾರ್, ಸೋಮನಾಥ್, ವೆಂಕಟೇಶ್, ಮಂಗಳ ಶೆಟ್ಟಿ, ಭಾಗ್ಯಕೃಷ್ಣ, ಹೇಮಲತಾ ಇಂದ್ರೇಶ್, ನಾಗವೇಣಿರವರು ಮಹಾತ್ಮ ಜ್ಯೋತಿ ಬಾಪುಲೆ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಹಿಂದುಳಿದ ವರ್ಗಗಳ ನಾಯಕರಾದ ಹೇಮಂತ್ ಮಾತನಾಡಿ, ಶಿಕ್ಷಣ ತಜ್ಞ, ಸಾಮಾಜಿಕ ನ್ಯಾಯದ ಹೋರಾಟಗಾರ ಜ್ಯೋತಿಬಾ ಪುಲೆರವರು ಎಲ್ಲ ವರ್ಗ, ಧರ್ಮದವರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರು. ಮೇಲು ಜಾತಿಯವರಿಗೆ ಶಿಕ್ಷಣ ಮೀಸಲಾಗಿದ್ದ ಕಾಲದಲ್ಲಿ ಜ್ಯೋತಿಬಾ ಪುಲೆ ಹಿಂದುಳಿದ ವರ್ಗ, ದಲಿತ ಸಮುದಾಯದವರು ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕು ಎಂದು ಹೋರಾಟ ಮಾಡಿದರು ಎಂದರು
ಜ್ಯೋತಿಬಾಪುಲೆ ಪತ್ನಿ ಸಾವಿತ್ರಿ ಬಾಪುಲೆ ದೇಶದ ಮೊಟ್ಟಮೊದಲ ಶಿಕ್ಷಕಿಯಾಗಿದ್ದರು. ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು. ಇಂದು ಜ್ಯೋತಿಭಾಪುಲೆ ಜನ್ಮದಿನಚಾರಣೆ. ಅವರ ಆದರ್ಶ ಜೀವನ ಸಿದ್ದಾಂತಗಳನ್ನು ಎಲ್ಲರ ಜೀವನದಲ್ಲಿ ಆಳವಡಿಸಿಕೊಂಡರೆ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.




