ವಸತಿಹೀನರಿಗೆ ವಸತಿ ಕಲ್ಪಿಸಲು ಮುಖ್ಯಮಂತ್ರಿಗಳಿಗೆ ಮನವಿ
ಬೆಂಗಳೂರು: ಫೀಡಂ ಪಾರ್ಕ್ ಅವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಮತ್ತು ವಸತಿಹೀನರ ವಸತಿಪರ ಹೋರಾಟ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷ ಎಸ್.ಮಂಜುನಾಥ್ ನೇತೃತ್ವದಲ್ಲಿ ದಲಿತ ತಮಟೆ ಚಳುವಳಿ ನಡೆಯಿತು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯ ಗೌರವಾಧ್ಯಕ್ಷಾ ಮಾಯಾಣ್ಣ, ರಾಜ್ಯ ಮಹಿಳಾ ಅಧ್ಯಕ್ಷೆ ಪ್ರಿಯ ಎಮ್.ರಾಜ್ಯ ಮಹಿಳಾ ಉಪಾಧ್ಯಕ್ಷೆ ಮಂಜುಳ ಕೆ.ಎನ್. ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಪಿ ಹಾಗೂ ರಾಜ್ಯ ಉಪಾಧ್ಯಕ್ಷರಾದ ವೆಂಕಟೇಶ್ ಡಿ ಸಾವಿರಾರು ವಸತಿಹೀನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಮಾತನಾಡಿದ ಎಸ್.ಮಂಜನಾಥ್, ಐದು ಬೇಡಿಕೆಗಳ ಈಡೇರಿಕೆಗಾಗಿ ಫೀಡಂ ಪಾರ್ಕ್ ನಲ್ಲಿ ಸಾವಿರಾರು ವಸತಿಹೀನರ ಜೊತೆಯಲ್ಲಿ ಬೃಹತ್ ಪ್ರತಿಭಟನೆ ದಲಿತರ ತಮಟೆ ಚಳುವಳಿ ಎಂದರು.
ನಮ್ಮ ಬೇಡಿಕೆಗಳು, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಕೊಡಿಗೆಹಳ್ಳಿ, ಕೆರೆ ಅಂಗಳದ ರಮಾಬಾಯಿ ಕೊಳಚೆ ನಿವಾಸಿಗಳಾದ 188 ಕುಟುಂಬಗಳನ್ನು ಯಲಹಂಕ (ತಾ)ಯಲಹಂಕ (ಹೊ)ಚಿಕ್ಕಬೆಟ್ಟಹಳ್ಳಿ ಗ್ರಾಮ ಸರ್ವೆ ನಂಬರ್ 49 ದ ಜಮೀನಿನಲ್ಲಿ 16.20.36. ಮನೆಗಳನ್ನು ನಿರ್ಮಿಸಿ ಸ್ಥಳಾಂತರಿಸಬೇಕು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ತಣಿಸಂದ್ರ ರಾಚೇನಹಳ್ಳಿ ಗ್ರಾಮದ (ಅಂಬೇಡ್ಕರ್) ಕೊಳಚೆ ನಿವಾಸಿಗಳಾದ 250 ಕುಟುಂಬಗಳನ್ನು ಚಿಕ್ಕಜಾಲ(ಹೊ)ಯಲಹಂಕ (ತಾ)ಉತ್ಪನಹಳ್ಳಿ 71.72.736 ಸ್ಥಳಾಂತರಿಸಬೇಕು.
ಬೆಂಗಳೂರು ಉತ್ತರ (ತಾ) ಸರ್ವಜ್ಞ ನಗರ ಕ್ಷೇತ್ರ ನಾಗವಾರ ಗ್ರಾಮ ವೀರಣ್ಯಪಾಳ್ಯ ಇಂದ್ರ ಕ್ವಾಂಟಿನ್ ಮುಂಭಾಗ ಹಾಗೂ ಸುತ್ತಮುತ್ತಲಿನಲ್ಲಿ ಸಣ್ಣ ಪುಟ್ಟ ಶೆಡ್ ಗಳನ್ನೂ ನಿರ್ಮಿಸಿಕೊಂಡು ವಾಸಮಾಡುತ್ತಿರುವ ವಾಸಕ್ಕೆ ಯೋಗ್ಯವಿಲ್ಲದ ಸ್ಥಳದಲ್ಲಿ ವಾಸವಾಗಿರುವ ಈ ಕೊಳಚೆ ಪ್ರದೇಶ ನಿವಾಸಿಗಳನ್ನು ಬೆಂಗಳೂರು ಉತ್ತರ (ತಾ) ದಾಸನ ಪುರ ಹೋಬಳಿ ಕುಕ್ರನ ಹಳ್ಳಿ ಗ್ರಾಮ ಸರ್ವೇ ನಂಬರ್ 75 ಇಲ್ಲಿಗೆ ಸ್ಥಳಾಂತರಿಸಬೆಕು.
ಯಶವಂವಪುರ (ತಾ)ಯಶವಂತಪುರ (ಹೊ) ಕೆರೆಗುಡ್ಡದಹಳ್ಳಿ ಗ್ರಾಮ ಸರ್ವ್ ನಂಬರ್ 3 ರಲ್ಲಿ 4 ಎಕರೆ 25 ಗುಂಟೆ ಜಾಗದಲ್ಲಿ ಸುಮಾರು 200 ಕುಟುಂಬಗಳು ವಾಸವಾಗಿದ್ದು ಅಕ್ರಮ ಸಕ್ರಮದಡಿ 940 94CC ಅಡಿಯಲ್ಲಿ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಬೇಕು.
ಯಲಹಂಕ (ತಾ)ಯಲಹಂಕ (ಹೊ) ಚಿಕ್ಕ ಬೆಟ್ಟಹಳ್ಳಿ ಗ್ರಾಮ ಸರ್ವೇ ನಂಬರ್ 18 ರಲ್ಲಿ 4 ಎಕರೆ ವಿಸ್ತೀರ್ಣದಲ್ಲಿ 250 ಕುಟುಂಬಗಳು ಸಣ್ಣ ಪುಟ್ಟ ಶೆಡ್ ಗಳನ್ನೂ ನಿರ್ಮಿಸಿಕೊಂಡು ವಾಸಮಾಡುತ್ತಿದ್ದು ಅಕ್ರಮ ಸಕ್ರಮದಡಿಯಲ್ಲಿ 94C 94CC ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ 10 ವರ್ಷಗಳಾದರೂ ಇನ್ನು ಹಕ್ಕು ಪತ್ರ ವಿತರಿಸಿರುವುದಿಲ್ಲ. ಯಲಹಂಕ ತಹಶೀಲ್ದಾರ್ ಹಾಗು ನಾಡಕಛೇರಿ ಅಧಿಕಾರಿಯವರು ಮೀನಮೇಷ ಎಣಿಸುತ್ತಿದ್ದಾರೆ.
ಡಾ ಬಿ ಆರ್ ಅಂಬೇಡ್ಕರ್ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ (ರಿ)ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.




