ಎಮ್.ಶಿವರಾಜು ಹುಟ್ಟುಹಬ್ಬದ ಆಚರಣೆ
ಬೆಂಗಳೂರು: ಶಂಕರಮಠದ ಜನಸಂಪರ್ಕ ಕಛೇರಿಯಲ್ಲಿ ಆಡಳಿತ ಪಕ್ಷದ ಮಾಜಿ ನಾಯಕ, ಕಾಂಗ್ರೆಸ್ ಪಕ್ಷದ ಮುಖಂಡ ಎಮ್.ಶಿವರಾಜು ಅವರ ಹುಟ್ಟುಹಬ್ಬದ ಅಚರಣೆಯನ್ನು ಅಭಿಮಾನಿಗಳು ಮತ್ತು ಸ್ನೇಹಿತರು ಅದ್ದೂರಿಯಾಗಿ ಆಚರಿಸಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಕಾಂಗ್ರೆಸ್ ಪಕ್ಷದ ಮುಖಂಡರಾದ ವಿಶಾಲಕ್ಷ್ಮಿ ಶಿವರಾಜು, ಸತ್ಯಪ್ಪ, ಜನಾರ್ದನ್, ನಟರಾಜ್, ಆನಂದ್, ಚಂದ್ರಶೇಖರ್, ಗಂಗಾಧರ್, ಮಲ್ಲಿಕಾ, ಮಂಜುನಾಥ್ ಬಿ. ರವರು ಹುಟ್ಟುಹಬ್ಬದ ಶುಭಕೋರಿ ಎಮ್.ಶಿವರಾಜುರವರನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಎಮ್.ಶಿವರಾಜುರವರು ಮಾತನಾಡಿ ಜನ ಸೇವೆ ನಿತ್ಯ ನಿರಂತರ, ಜನರ ನಡುವೆ ಇದ್ದಾಗ ಅವರ ಸೇವೆ ಮಾಡಿದಾಗ ದೇವರ ಸೇವೆ ಮಾಡಿದಂತೆ. ಜನರ ಆಶೀರ್ವಾದದ ಬಲದಿಂದ ನನ್ನ ತಾಯಿಯವರು ಒಂದು ಬಾರಿ ಮತ್ತು ನಾನು ಮೂರು ಬಾರಿ ಬಿಬಿಎಂಪಿ ಸದಸ್ಯನಾಗಿ ಜನರ ಸೇವೆ ಮಾಡಿದ್ದೇನೆ ಎಂದರು.
ಶ್ರೀ ಮಹದೇವಪ್ಪ ಪ್ರತಿಷ್ಠಾನದ ವತಿಯಿಂದ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಪ್ರತಿವರ್ಷ 50,000 ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಆರೋಗ್ಯ ತಪಾಸಣೆಗಾಗಿ ಇಂದಿರಾ ಹೆಲ್ತ್ ಕೇರ್ ಮೂಲಕ ಪ್ರತಿದಿನ ಸಾರ್ವಜನಿಕರಿಗೆ ಉಚಿತವಾಗಿ ಸಕ್ಕರೆ ಖಾಯಿಲೆ ಮತ್ತು ಬಿ.ಪಿ ಹಾಗೂ ಇ.ಸಿ.ಜಿ ಹಾಗೂ ಸಾಮಾನ್ಯ ತಪಾಸಣೆ ಮಾಡಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣೆ ಶಿಬಿರದ ಮೂಲಕ 500ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆ ಉಚಿತವಾಗಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ 25 ವರ್ಷಗಳ ರಾಜಕೀಯ ಮತ್ತು ಸಮಾಜಸೇವೆಗೆ ನನಗೆ ಸಹಕಾರ, ಬೆಂಬಲ ನೀಡುತ್ತಿರುವ ಜನತೆಗೆ ಹಾಗೂ ರಾಜಕೀಯ ನಾಯಕರುಗಳಿಗೆ ಕಾರ್ಯಕರ್ತರಿಗೆ ಹೃತ್ವೂರ್ವಕ ಧನ್ಯವಾದಗಳು ಹಾಗೂ ಸದಾ ನಿರಂತರವಾಗಿ ನಿಮ್ಮ ಸಹಕಾರವಿರಲಿ ಎಂದು ಮನವಿ ಮಾಡಿದರು.




