ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಕ್ರಮ: ಸಿಎಂಗೆ ದೂರು ನೀಡಿದ ಬಿಜೆಪಿ ನಾಯಕ ಎನ್.ಆರ್.ರಮೇಶ್

4 years ago

ಬೆಂಗಳೂರು:  ಬಿಬಿಎಂಪಿ ವಾರ್ಡ್ ಮಟ್ಟದ ರಸ್ತೆಗಳನ್ನು ಹಾಗೂ ದೋಷಗಳ ಹೊಣೆಗಾರಿಕೆ ಅವಧಿ (Defect Liability Period) ಇರುವಂತಹ ಮುಖ್ಯ ರಸ್ತೆಗಳನ್ನು ಹೊರತುಪಡಿಸಿ, ಇನ್ನುಳಿದ ಮುಖ್ಯ ರಸ್ತೆ (Arterial & Sub-Arterial Roads) ಗಳಲ್ಲಿನ ರಸ್ತೆಗುಂಡಿಗಳನ್ನು ಮುಚ್ಚುವ ಹೆಸರಿನಲ್ಲಿ ಕಳೆದ ಏಳು ವರ್ಷಗಳಲ್ಲಿ ಸಾವಿರಾರು ಕೋಟಿ ರೂ.ಗಳನ್ನು ವ್ಯರ್ಥವಾಗಿ ವೆಚ್ಛ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಈ ಸಂಬಂಧ ಲಿಖಿತ ದೂರನ್ನು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನೀಡಿದ್ದು, Python ಯಂತ್ರಗಳನ್ನು ಬಳಸಿ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸುಮಾರು 36 ಕೋಟಿ ರೂ.ಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅತ್ಯಂತ ವಿಫಲವಾದ Python ಯಂತ್ರಗಳ ಬಳಕೆಯಿಂದ ಯಾವುದೇ ಪ್ರಯೋಜನವಿಲ್ಲವೆಂದು ಮತ್ತು ಅದರ ಬಳಕೆಯನ್ನು ನಿಲ್ಲಿಸಬೇಕೆಂದು ಪಾಲಿಕೆಯ ಸಭೆಗಳಲ್ಲಿ ಹಲವಾರು ಬಾರಿ ಚರ್ಚೆಗಳಾಗಿ, ಅದರ ಬಳಕೆಯನ್ನು ಮುಂದುವರೆಸುವುದಿಲ್ಲವೆಂದು ಸ್ವತಃ ಆಯುಕ್ತರೇ ಅಧಿಕೃತವಾಗಿ ಘೋಷಿಸಿದ್ದರು ಎಂದಿದ್ದಾರೆ.

ಜೊತೆಗೆ, ಇವೆಲ್ಲದರ ನಡುವೆ, ಪಾಲಿಕೆಯ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯಗಳಿಗೆಂದು ಸ್ವತಃ ಪಾಲಿಕೆಯೇ ತನ್ನದೇ ಸ್ಥಳದಲ್ಲಿ (ಕಣ್ಣೂರು) – ತನ್ನದೇ ಬಂಡವಾಳದಲ್ಲಿ Hot Bacth Mix Plant ಅನ್ನು ಸ್ಥಾಪಿಸಿ, ಅದರ ನಿರ್ವಹಣೆಯ ಗುತ್ತಿಗೆಯನ್ನು ಕಾನೂನು ರೀತ್ಯಾ Tender ಮೂಲಕ M/s JMC Constructions Pvt.Ltd. ಎಂಬ ಸಂಸ್ಥೆಗೆ ನೀಡಿದ್ದರೂ ಸಹ , ಅದ್ಯಾವ ಕಾರಣಕ್ಕಾಗಿಯೋ ಏನೋ Python ಯಂತ್ರಗಳಿಗೆ ಸಂಬಂಧಿಸಿದ M/s American Road Technologies & Solutions Pvt.Ltd. ಎಂಬ ಅತ್ಯಂತ ಪ್ರಭಾವೀ ಸಂಸ್ಥೆಗೆ ಅದೇ ರಸ್ತೆಗುಂಡಿಗಳನ್ನು ಮುಚ್ಚುವ ಮತ್ತೊಂದು ಟೆಂಡರ್ ಅನುಮೋದನೆ ಮಾಡಿಕೊಡಲು ಹೊರಟಿರುವ “ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆ”ಯ ಅಧಿಕಾರಿಗಳ ಕಾನೂನು ಬಾಹಿರ ಕಾರ್ಯಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಹಿತ ಮಾನ್ಯ ಮುಖ್ಯಮಂತ್ರಿಗಳಿಗೆ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ, ಪಾಲಿಕೆಯ ಮುಖ್ಯ ಆಯುಕ್ತರಿಗೆ ಮತ್ತು ವಿಶೇಷ ಆಯುಕ್ತರು (ಯೋಜನೆ) ಇವರಿಗೆ ದೂರುಗಳನ್ನು ನೀಡಲಾಗಿದೆ ಎಂದಿದ್ದಾರೆ.

Leave a Reply