ಬೆಂಗಳೂರು: ಕಾಯಕವೇ ಕೈಲಾಸ, ಸಾಮಾಜಿಕ ನ್ಯಾಯದ ಪರಿಕಲ್ಪನೆ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ವಿಶ್ವದ ಮೊಟ್ಟ ಮೊದಲು ಪ್ರಜಾಪ್ರಭುತ್ವ ಸ್ಥಾಪಕ, ಮಾನವತಾವಾದಿ ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಚಿಂತನೆ, ಆದರ್ಶಗಳು ಇಂದಿಗೂ ಸಹ ಶಾಶ್ವತವಾಗಿ ನೆಲೆ ನಿಂತಿವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ, ದಾಸರಹಳ್ಳಿ ವಾರ್ಡ್ ನಲ್ಲಿ ಬಸವ ಜಯಂತಿ ಪ್ರಯುಕ್ತ ಕ್ರಾಂತಿಯೋಗಿ, ಶ್ರೀ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಮಾತಾಡಿದ ಅವರು, 12ನೇ ಶತಮಾನದಲ್ಲಿ ಮೂಢನಂಬಿಕೆ ವಿರುದ್ದ ಮತ್ತು ಮಹಿಳೆಯರಿಗೆ ಸಹ ಪುರುಷರಷ್ಟೆ ಸಮಾನ ಅವಕಾಶ ನೀಡಿದರು. ವಿಶ್ವದ ಮೊಟ್ಟ ಮೊದಲ ಸಂಸತ್ ಅನುಭವ ಮಂಟಪ. ಸ್ಥಾಪಕ ಬಸವೇಶ್ವರರು. ಅನುಭವ ಮಂಟಪದಲ್ಲಿ ಎಲ್ಲ ವರ್ಗ, ಧರ್ಮ ಮತ್ತು ಕಾಯಕ ಸಮಾಜ, ಮಹಿಳೆಯರಿಗೆ ಅವಕಾಶ ನೀಡಲಾಗಿತ್ತು ಎಂದರು.
ಶ್ರೀ ಬಸವೇಶ್ವರ ಸ್ಮರಣೆಯಲ್ಲಿ ದಾಸರಹಳ್ಳಿಯಲ್ಲಿ ಬಸವನ ಪಾರ್ಕ್ ನಿರ್ಮಿಸಲಾಗಿದೆ. ಅಲ್ಲಿ ಬಸವೇಶ್ವರ ಜೀವನ ಚರಿತ್ರೆ ಸಾರುವ ಚಿತ್ರಗಳು, ವಚನಗಳನ್ನು ಹಾಕಲಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ಮತ್ತು ಬಸವರಾಜ ಬೊಮ್ಮಾಯಿರವರ ಆಡಳಿತದಲ್ಲಿ ಶ್ರೀ ಬಸವೇಶ್ವರ ತತ್ವ,ಸಿದ್ದಾಂತಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಸಮಾಜದ ಕಟ್ಟಕಡೆಗೆ ಇರುವ ವ್ಯಕ್ತಿಗೆ ಸರ್ಕಾರದ ಯೋಜನೆಗಳನ್ನು ತಲುಪುವಂತೆ ಮಾಡುವುದು ಅವರನ್ನ ಸಮಾಜದ ಮುಖ್ಯವಾಹಿನಿಗೆ ತಂದು ಸಮ ಸಮಾಜದ ನಿರ್ಮಾಣ ಗುರಿ ನಮ್ಮದು. ಶ್ರೀ ಬಸವೇಶ್ವರ ಜೀವನ ಆದರ್ಶಗಳನ್ನು ಎಲ್ಲರ ಜೀವನದಲ್ಲಿ ಆಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಗಂಗಭೈರಯ್ಯ, ಶಿಲ್ಪ ಶ್ರೀಧರ್, ಬಿ.ಜೆ.ಪಿ. ಮುಖಂಡ ಶ್ರೀಧರ್, ಹೆಚ್.ರಮೇಶ್, ಡೊಡ್ಡವೀರಯ್ಯ, ರಾಜಪ್ಪ, ಕನ್ನಡ ಪರ ಹೋರಾಟಗಾರ ಪಾಲನೇತ್ರ ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.



