ಸಿ.ಎಂ.ನರಸಿಂಹಮೂರ್ತಿಯವರಿಗೆ ಬನವಾಸಿ ಕನ್ನಡಿಗ ಪ್ರಶಸ್ತಿ

3 years ago

ಚಾಮರಾಜನಗರ: ಬೆಂಗಳೂರಿನ ಪ್ರತಿಷ್ಠಿತ ಸಾರ್ಥಕ ಸಂಸ್ಥೆಯು ಪ್ರತಿವರ್ಷದಂತೆ ವಿಶಿಷ್ಟ ಸಾಧನೆಗೈದ ಸಾಧಕರಿಗೆ ನೀಡುವ 2022 – 23ನೇ ಸಾಲಿನ ರಾಜ್ಯಮಟ್ಟದ ಬನವಾಸಿ ಕನ್ನಡಿಗ ಪ್ರಶಸ್ತಿಗೆ ಅಂತರಾಷ್ಟ್ರೀಯ ಜಾನಪದ ಗಾಯಕ ಹಾಗೂ ರಂಗಕರ್ಮಿ ಸಿ.ಎಂ.ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ.
ಚಾಮರಾಜನಗರ ಗಡಿ ಜಿಲ್ಲೆಯಲ್ಲಿ ನಿರಂತರವಾಗಿ ಕನ್ನಡ ನಾಡು ನುಡಿ ಸೇವೆಯಲ್ಲಿ ಸಾಂಸ್ಕೃತಿಕ ರಾಯಭಾರಿಯಂತೆ ಕೆಲಸ ಮಾಡುತ್ತಿರುವ ಇವರಿಗೆ ಈಗಾಗಲೇ ಪ್ರತಿಷ್ಠಿತ ಪ್ರಶಸ್ತಿಗಳಾದ ದೂರದರ್ಶನ ಚಂದನ ಪ್ರಶಸ್ತಿ, ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಶಂಕರ್ ನಾಗ್ ಪ್ರಶಸ್ತಿ, ಮಂಟೇಸ್ವಾಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಯುವ ಪ್ರಶಸ್ತಿ, ಕರ್ನಾಟಕ ಅಕಾಡೆಮಿ ಸಿಜಿಕೆ ಪ್ರಶಸ್ತಿ ಸಂದಿವೆ.
ಇವರು ಈಗಾಗಲೇ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾಗಿಯು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ.
ಇವರಿಗೆ ಇದೇ ಮಾರ್ಚ್ 4 ರಂದು ಬೆಂಗಳೂರಿನಲ್ಲಿ  ಏರ್ಪಡಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply