ಉಡುಪಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮಾದರಿಯಲ್ಲಿ ತಂಡ ಕಟ್ಟಿಕೊಂಡು ಬಂದ ಅಪರಿಚಿತ ದುಷ್ಕರ್ಮಿಗಳು ಮನೆಯ ಲೂಟಿಗೆ ಯತ್ನಿಸಿ ವಿಫಲವಾದ ಘಟನೆ ಉಡುಪಿ ಜಿಲ್ಲೆಯಬ್ರಹ್ಮಾವರ ತಾಲೂಕಿನ ಮಣೂರಿನಲ್ಲಿ ನಡೆದಿದೆ.
- ಹೈಕಮಾಂಡ್ಗೆ ಕೊಡಲು ಹಣವಿದೆ, ರೈತರಿಗೆ ಕೊಡಲು ಹಣವಿಲ್ಲ: ಆರ್.ಅಶೋಕ
- ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಕುರಿತು ಡಿ ಕೆ ಶಿವಕುಮಾರ್ ಹೇಳಿದ್ದೇನು?
- ಬರ ಘೋಷಣೆಗಿರುವ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಲಿ: ಡಾ. ಜಿ. ಪರಮೇಶ್ವರ್
- ಧನುಷ್ ನಟನೆಯ ‘OM’ ಬಿಡುಗಡೆ ದಿನಾಂಕ ಮುಂದೂಡಿಕೆ!
- ಈ ದೇಶ ಕಟ್ಟಿದ್ದೇ ದಲಿತರು, ನೀಲಿ ಶಾಲು ಬಗ್ಗೆ ಮಾತಾಡೋಕೆ ನೀನ್ಯಾವನೋ?
ಮನೆಗೆ ಅಳವಡಿಸಿದ್ದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಲೈವ್ ಸರ್ವೈಲೆನ್ಸ್ ತಕ್ಷಣ ಅಲರ್ಟ್ ನೀಡಿದ ಪರಿಣಾಮ ಮನೆಯವರು ಬಾಗಿಲು ತೆಗೆಯದೇ ಮುಂಜಾಗ್ರತೆ ವಹಿಸಿದ್ದಾರೆ. ಇದರಿಂದ ಸಂಭಾವ್ಯ ದರೋಡೆಯಿಂದ ಬಚಾವಾಗಿದ್ದಾರೆ.
ಜುಲೈ 25ರ ಬೆಳಗ್ಗೆ 8.30ರ ವೇಳೆಗೆ ಮಣೂರಿನ ಕವಿತಾ ಅವರ ಮನೆಗೆ ಅಪರಿಚಿತ ದುಷ್ಕರ್ಮಿಗಳು ಎರಡು ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳಲ್ಲಿ ಸರ್ಕಾರಿ ಅಧಿಕಾರಿಗಳಂತೆ ಆಗಮಿಸಿದ್ದಾರೆ. ಇಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದಾಗ ಹಾಗೂ ಯಾರೂ ಇಲ್ಲದ ಸಮಯ ನೋಡಿ ತಂಡ ಆಗಮಿಸಿದೆ. ಗೇಟ್ ತಳ್ಳಿ ತೆರೆಯಲು ಯತ್ನಿಸಿ, ಅದು ತೆರೆದುಕೊಳ್ಳದೆ ಇದ್ದಾಗ ಮುರಿಯಲು ಯತ್ನಿಸಿದ್ದಾರೆ.
ಗೇಟ್ ತೆರೆಯದೆ ಇದ್ದಾಗ ಇನ್ನೊಂದು ಕಡೆಯಿಂದ ಕಂಪೌಂಡ್ ಜಿಗಿದು ಆವರಣ ಪ್ರವೇಶಿಸಿ ಬಾಗಿಲು ಬಡಿದು ಮನೆಯವರನ್ನು ಕರೆದಿದ್ದಾರೆ. ಆದರೆ ಈ ಮನೆಗೆ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಲೈವ್ ಸರ್ವೈಲೆನ್ಸ್ ಅಳವಡಿಸಿದ್ದ ಕಾರಣ, ಸಂಸ್ಥೆಯವರು ಕೂಡಲೇ ಮನೆ ಮಾಲಕಿಗೆ ಅಲರ್ಟ್ ನೀಡಿದ್ದಾರೆ. ಯಾರೋ ಅಕ್ರಮವಾಗಿ ಕೌಂಪೌಂಡ್ ಪ್ರವೇಶಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತುಕೊಂಡ ಮಾಲಕಿ ಬಾಗಿಲು ತೆರೆದಿಲ್ಲ. ಸ್ವಲ್ಪ ಹೊತ್ತು ಕಾದು ಲೂಟಿಗೆ ಆಗಮಿಸಿದ ತಂಡ ವಾಪಸ್ ತೆರಳಿದೆ.
ಸಿಸಿಟಿವಿಯಲ್ಲಿ ದಾಖಲಾಗಿರುವ ಅಪರಿಚಿತ ತಂಡದ ಕೃತ್ಯದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕುಂದಾಪುರ ವ್ಯಾಪ್ತಿಯಲ್ಲಿ ಹಲವು ಕಳ್ಳತನಗಳನ್ನು ಸೈನ್ ಇನ್ ಸೆಕ್ಯೂರಿಟಿ ವಿಫಲಗೊಳಿಸಿದೆ. ಇದು ಸಿಸಿಟಿವಿ ಅಳವಡಿಸಿರುವ ಮನೆಗೆ 24 ಗಂಟೆಯೂ ಭದ್ರತೆ ನೀಡುತ್ತದೆ. ಯಾವುದಾದರೂ ಅನಪೇಕ್ಷಿತ ಬೆಳವಣಿಗೆ ಕಂಡರೆ ಎಚ್ಚರಿಕೆ ನೀಡುತ್ತದೆ.
ಸುಮಾರು 6-8 ಜನ ಇದ್ದ ಈ ದುಷ್ಕರ್ಮಿಗಳ ತಂಡದಲ್ಲಿ ಎಲ್ಲರೂ ಟಿಪ್ಟಾಪ್ ವೇಷ ಧರಿಸಿದ್ದಾರೆ. ಒಬ್ಬ ಪೊಲೀಸ್ ಪೇದೆ ಡ್ರೆಸ್ ಧರಿಸಿದ್ದ. ಸಿಸಿಟಿವಿಯಲ್ಲಿ ಮುಖ ಕಾಣದಂತೆ ನೋಡಿಕೊಳ್ಳಲು ಇವರು ಯತ್ನಿಸಿದ್ದಾರೆ. ಮನೆ ಮಾಲಕಿ ಕವಿತಾ ಈ ಬಗ್ಗೆ ದೂರು ನೀಡಿದ್ದು, ಕೋಟ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ.




