ಚಾಮರಾಜಪೇಟೆಯಲ್ಲಿ ಜಮೀರ್ ಕಟ್ಟಿಹಾಕಲು ಯತ್ನ

3 years ago

ಚಾಮರಾಜಪೇಟೆ: ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಿನ ಸಂಖ್ಯೆಯ ಮತದಾರರಾಗಿರುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಖಾಡ ಕದನ ಕೌತುಕ ಮೂಡಿಸಿದೆ. ಕಾಂಗ್ರೆಸ್ಸಿನ ಪ್ರಭಾವಿ ಅಲ್ಪಸಂಖ್ಯಾತ ಮುಖಂಡ ಹಾಗೂ ಮಾಜಿ ಸಚಿವ  ಜಮೀರ್ ಅಹ್ಮದ್ ಖಾನ್ ಅವರನ್ನು ಕಟ್ಟಿ ಹಾಕಬೇಕೆಂದು ತಂತ್ರ ಮಾಡಿರುವ ಬಿಜೆಪಿ ಆಮ್ ಆದ್ಮಿ ಪಕ್ಷದಿಂದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಕರೆತಂದು ತನ್ನ ಹುರಿಯಾಳಾಗಿ ಮಾಡಿದೆ. ಭಾಸ್ಕರ್ ರಾವ್ ಪೊಲೀಸ್ ಅಧಿಕಾರಿಯಾಗಿ ಈ ಪ್ರದೇಶದಲ್ಲಿ ಸೇವೆ ಸಲ್ಲಿಸಿ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಕೋವಿಡ್ ಸೇರಿದಂತೆ ಸಂಕಷ್ಟ ಸಮಯದಲ್ಲಿ ಜಮೀರ್ ಅಹ್ಮದ್ ಖಾನ್ ಕೇವಲ ಅವರ ಸಮುದಾಯದವರಿಗೆ ಮಾತ್ರ ಸಹಾಯ ಮಾಡಿದರು ಎಂಬ ಆರೋಪವನ್ನು ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ ಈದ್ಗಾ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಜೊತೆಗೆ ಗಣೇಶೋತ್ಸವ ಆಚರಣೆ ತನ್ನ ಕಾರ್ಯ ಸೂಚಿ ಎಂದು ಮತದಾರರ ಮುಂದಿಡುವ ಮೂಲಕ ಅಖಾಡಕ್ಕೆ ಭರ್ಜರಿ ರಂಗು ಬರುವಂತೆ ಮಾಡಿದೆ.

ಕಾಂಗ್ರೆಸ್ಸಿನ ಜಮೀರ್ ಅಹ್ಮದ್ ತಮ್ಮದೇ ಆದ ಮತ ಬ್ಯಾಂಕ್ ಹೊಂದಿದ್ದು, ಅಲ್ಪಸಂಖ್ಯಾತರು ಮತ್ತು ಕೊಳಗೇರಿ ಪ್ರದೇಶಗಳಲ್ಲಿ ಸಾಕಷ್ಟು ಪ್ರಭಾವಶಾಲಿ. ಆದರೆ ಇತರೆ ಭಾಗಗಳಲ್ಲಿ ಅಷ್ಟೇ ಪ್ರಮಾಣದ ಪ್ರತಿರೋಧ ಎದುರಿಸುತ್ತಿದ್ದಾರೆ.

ಜೆಡಿಎಸ್ ನಿಂದ ಗೋವಿಂದರಾಜು ಮತ್ತು ಆಮ್ ಆದ್ಮಿ ಪಕ್ಷದಿಂದ ಪ್ರಕಾಶ್ ಚಂದ್ರ ಕಣದಲ್ಲಿದ್ದಾರೆ. ಈ ಇಬ್ಬರು ಪಡೆಯುವ ಮತಗಳು ನಿರ್ಣಾಯಕವಾಗಲಿವೆ.

Leave a Reply