ಮೈಸೂರಿನಲ್ಲಿ ಪೊಲಿಸ್ ಸ್ಟೇಷನ್ ಮೇಲೆ ರಾಜಕಾರಣಿಗಳ ಕುಮ್ಮಕ್ಕಿನಿಂದ ದಾಳಿ ನಡೆದಿದ್ದು, ಇದು ನೇರವಾಗಿ ಕಾಂಗ್ರೆಸ್ ಸರ್ಕಾರದ ಮೇಲಿನ ದಾಳಿ. ಮುಖ್ಯಮಂತ್ರಿಗಳು ಇದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ನೋಡಬೇಕು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಕರ್ನಾಟಕ, ಕೇರಳ ತಮಿಳುನಾಡಿನಲ್ಲಿ ಒಂದು ವರ್ಗ ಮತ್ತು ಸಂಘಟನೆ ನಮ್ಮ ಇಡೀ ದೇಶ ಹಾಗೂ ವ್ಯವಸ್ಥೆಯನ್ನೇ ಚಾಲೆಂಜ್ ಮಾಡುವ ರೀತಿ ಕಾರ್ಯ ಚಟುವಟಿಕೆ ಮಾಡುತ್ತಿವೆ. ಪಿಎಫ್ ಐ ನಿಷೇಧ ಆಗಿದೆ. ಆದರೂ ಕೂಡ ಆ ಸಂಸ್ಥೆಯ ಕಾರ್ಯಕರ್ತರು ಬೇರೆ ಬೇರೆ ಹೆಸರಿನಲ್ಲಿ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ.
ಮಂಗಳೂರು, ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳಿಗೂ ಮೈಸೂರಿನಲ್ಲಿ ನಡೆದ ಘಟನೆಗೂ ಸಾಮ್ಯತೆ ಇದೆ. ನಮ್ಮ ಸರ್ಕಾರ ಇದ್ದಾಗ ಕಠಿಣ ಕ್ರಮ ಕೈಗೊಂಡು ಹಲವಾರು ಜನರನ್ನು ಜೈಲಿಗೆ ಹಾಕಿದ್ದೆವು. ಈ ಸರ್ಕಾರ ಬಂದ ಮೇಲೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಯಲ್ಲಿ ಭಾಗಿಯಾದವರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆದು ಅವರೆಲ್ಲರೂ ಅಮಾಯಕರು ಎಂದು ಹೇಳಿದರು. ಅವರು ಮಾಡಿದ ಘಟನೆಯ ವಿಡಿಯೊ ಸಿಸಿ ಟಿವಿಯಲ್ಲಿ ಸಿಕ್ಕರೂ ಅವರನ್ನು ಅಮಾಯಕರು ಎಂದರು. ಅದರಿಂದ ಪ್ರೇರಣೆಗೊಂಡು ಈಗ ಮತ್ತೆ ಮೈಸೂರಿನಲ್ಲಿ ಪೊಲಿಸ್ ಸ್ಟೇಷನ್ ಮೇಲೆ ದಾಳಿ, ಪೊಲಿಸ್ ವಾಹನದ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಪೊಲಿಸ್ ಇನ್ಸ್ ಪೆಕ್ಟರ್ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಡಿಸಿಪಿ ಕಾರ್ ಮೇಲೂ ದಾಳಿ ಮಾಡುವಷ್ಟು ಧೈರ್ಯ ಬಂದಿದೆ. ಈ ಧೈರ್ಯ ಎಲ್ಲಿಂದ ಬಂತು? ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ರಾಜಕಾರಣಿಗಳ ಕುಮ್ಮಕ್ಕಿನಿಂದ ಈ ದಾಳಿ ನಡೆದಿದ್ದು, ಇದು ನೇರವಾಗಿ ಕಾಂಗ್ರೆಸ್ ಸರ್ಕಾರದ ಮೇಲಿನ ದಾಳಿ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ಆಗಿದೆ. ಮುಖ್ಯಮಂತ್ರಿಗಳು ಇದನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ನೋಡಬೇಕು. ಅವರು ಯಾವಾಗಲೂ ಸಂವಿಧಾನ, ರೂಲ್ ಆಫ್ ಲಾ ಅಂತ ಹೇಳುತ್ತಾರೆ. ಇವತ್ತು ರೂಲ್ ಆಫ್ ಲಾ ಪ್ರಕಾರ ಕ್ರಮ ಕೈಗೊಳ್ಳುತ್ತಾರಾ? ಅಥವಾ ತುಷ್ಟೀಕರಣಕ್ಕಾಗಿ ಸುಮ್ಮನಾಗುತ್ತಾರೊ ಎನ್ನುವುದನ್ನು ಜನರು ನೋಡುತ್ತಾರೆ. ಇವರು ಸಂವಿಧಾನಬದ್ಧವಾಗಿ ಆಡಳಿತ ಮಾಡುತ್ತಾರೊ ಅಥವಾ ರಾಜಕಾರಣಕ್ಕಾಗಿ ಆಡಳಿತ ಮಾಡುತ್ತಾರೊ ಎನ್ನುವನ್ನುದನ್ನು ನೋಡಿ ಜನರು ಮುಂದಿನ ತೀರ್ಮಾನ ಮಾಡುತ್ತಾರೆ. ಘಟನೆಯ ವಿಡಿಯೊವನ್ನು ಇಡಿ ಜಗತ್ತೇ ನೋಡಿದರು ಕಾಂಗ್ರೆಸ್ ನವರು ಅದನ್ನು ಸಮರ್ಥಿಸಿಕೊಳ್ಳುತ್ತಾರೆಂದರೆ ಅವರು ಎಷ್ಟು ಭಂಡತನಕ್ಕೆ ಬಿದ್ದಿದ್ದಾರೆ ನೋಡಿ.
– ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ




