ಎಟಿಎಂ ಯಂತ್ರ ಕತ್ತರಿಸಿ 30 ಲಕ್ಷ ರೂಪಾಯಿ ಹಣ ಕಳವು

1 year ago

ಬೆಂಗಳೂರು: ಬ್ಯಾಂಕ್ ಗಳು ತಮ್ಮ ಎಟಿಎಂಗಳಿಗೆ ಸಾಕಷ್ಟು ಭದ್ರತೆ ಒದಗಿಸುವಂತೆ ಗೃಹ ಇಲಾಖೆ ಸ್ಪಷ್ಟ ಆದೇಶ ನೀಡಿದ್ದರೂ ಕೆಲವು ಬ್ಯಾಂಕುಗಳು ಅದನ್ನು ಪಾಲಿಸುತ್ತಿಲ್ಲ. ಇದರ ಪರಿಣಾಮ ಎಟಿಎಂ ದರೋಡೆ ಪ್ರಕರಣಗಳು ವರದಿಯಾತೊಡಗಿವೆ.

ಬೆಂಗಳೂರು ಹೊರವಲಯದ ಸೂಲಿಬೆಲೆಯ ದೇವನಹಳ್ಳಿ ಕ್ರಾಸ್‍ನಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ಕತ್ತರಿಸಿ 30 ಲಕ್ಷ ರೂಪಾಯಿಗೂ ಹೆಚ್ಚಿನ ಹಣ ಕಳವು ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ದೇವನಹಳ್ಳಿ ಕ್ರಾಸ್‍ನ ಸ್ಟೇಟ್ಸ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ ಎಟಿಎಂ ಕೇಂದ್ರದ ಬಳಿ ಆಂಧ್ರ ಪ್ರದೇಶದ ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಂಕಿ ಕ್ಯಾಪ್ ಧರಿಸಿ ಮೂದಲು ಸಿಸಿಟಿವಿಗೆ ಸ್ಪ್ರೇ ಬಳಸಿ ಬಣ್ಣ ಹಾಕಿ ಮುಖ ಕಾಣದಂತೆ ಮರೆಮಾಚಿದ್ದಾರೆ.

ಕಾರಿನಿಂದಲೇ ಗ್ಯಾಸ್ ಕಟರ್ ಬಳಸಿ ಎಟಿಎಂ ಕೇಂದ್ರದ ಶೆಟರ್ ಕತ್ತರಿಸಿ ಒಳನುಗ್ಗಿ ಯಂತ್ರ ಕತ್ತರಿಸಿ  30 ಲಕ್ಷ ರೂ.ಗೂ ಹೆಚ್ಚು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. 

ಸ್ಥಳಕ್ಕೆ ಗ್ರಾಮಾಂತರ ಎಸ್‍ಪಿ ಸಿ.ಕೆ ಬಾಬಾ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಕೈಗೊಳ್ಳಲಾಗಿದೆ.

Leave a Reply