ಸ್ವಾತಂತ್ರ್ಯೋತ್ತರ ಭಾರತದ ಬಹು ದೊಡ್ಡ ಘಟನೆಯಾಗಿರುವ ಚುನಾವಣಾ ಬಾಂಡ್‌ಗಳ ಅಕ್ರಮವನ್ನು ಬಯಲಿಗೆಳೆದದ್ದು ಅಹಮದಾಬಾದಿನ ʼಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ಎಂಬ ಸಂಸ್ಥೆ. ಈ ಸಂಸ್ಥೆಯನ್ನು ೧೯೯೯ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಅಹಮದಾಬಾದ್‌ನ ಪ್ರಾಧ್ಯಾಪಕರ ಸಣ್ಣ ಗುಂಪು ಸ್ಥಾಪಿಸಿತು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಪ್ರೊ. ತ್ರಿಲೋಚನಾ ಶಾಸ್ತ್ರಿಗಳ ಕೊಠಡಿಯಲ್ಲಿ ನಡೆದ ಬೆರಳೆಣಿಕೆಯ ಜನರಿದ್ದ ಸಭೆಯೊಂದರಲ್ಲಿ ತೆಗೆದುಕೊಂಡ ತೀರ್ಮಾನಗಳು ಇವತ್ತು ಈ ಮಟ್ಟಕ್ಕೆ ಬೆಳೆದುನಿಂತಿದೆ. ಅದೇ ವರ್ಷ ಈ ಸಂಸ್ಥೆಯು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಬಹಿರಂಗಪಡಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿತ್ತು. ಸರಕಾರ ಅದನ್ನು ವಿರೋಧಿಸಿತು.
ಆದರೆ ೨೦೦೨ರಲ್ಲಿ ಸುಪ್ರೀಂ ಕೋರ್ಟ್ ಎಡಿಆರ್ ನ ಕೋರಿಕೆಯನ್ನು ಮನ್ನಿಸಿತು. ಪರಿಣಾಮವಾಗಿ ೨೦೦೩ರ ಆನಂತರ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ತಮ್ಮ ಅಪರಾಧ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯನ್ನು ಬಹಿರಂಗಪಡಿಸಬೇಕಾಯಿತು.
ʼಚುನಾವಣೆಗಳು, ರಾಜಕೀಯ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳ ನಡುವಣ ಅನೈತಿಕ ಮತ್ತು ಅಕ್ರಮ ಸಂಬಂಧಗಳನ್ನು ಬಯಲಿಗೆಳೆಯುತ್ತಾ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ನಮ್ಮ ಗುರಿಯಾಗಿದೆʼ ಎಂದು ಎ ಡಿ ಆರ್ ಹೇಳುತ್ತಿದೆ. ಸಂಸ್ಥೆಗೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡುತ್ತಿರುವವರು ನ್ಯಾಯವಾದಿ ಪ್ರಶಾಂತ್ ಭೂಷಣ್.
ಅರುಣ್ ಜೇಟ್ಲಿಯವರು ೨೦೧೭ರಲ್ಲಿ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಹೊಸ ಬಿಲ್ ತಂದಾಗಲೇ ಎಡಿಆರ್ ಇದರ ವಿರುದ್ಧ ದೂರು ದಾಖಲಿಸಿತ್ತು. ಇದೀಗ ಅದರ ದಣಿವರಿಯದ ಹೋರಾಟ ಫಲನೀಡಿದೆ. ಅನಾಮಧೇಯ ಚುನಾವಣಾ ಬಾಂಡ್ ಗಳು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕ್ರಿಯೆಯು ಭಾರತೀಯ ಸಂವಿಧಾನದ ೧೧೦ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ನ್ಯಾಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಪಕ್ಷಗಳಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಮಾತ್ರ ಮೊದಲಿಂದಲೂ ಚುನಾವಣಾ ಬಾಂಡನ್ನು ವಿರೋಧಿಸಿತ್ತು.
ಇಂಥ ಕೆಲಗಳನ್ನು ನಿಜವಾಗಲೂ ಮಾಡಬೇಕಾಗಿದ್ದುದು ತನಿಖಾ ವರದಿಗೆ ಆದ್ಯತೆ ನೀಡುತ್ತಿರುವ ಮಾಧ್ಯಮಗಳು. ಆದರೆ ಇಂದು ಅವು ಅಂಥ ಶಕ್ತಿಯನ್ನು ಕಳದುಕೊಂಡಿವೆ. ಆದರೆ ಅನೇಕ ಪ್ರತಿರೋಧಗಳ ನಡುವೆಯೂ ನಿವೃತ್ತ ಪ್ರಾಧ್ಯಾಪಕರು ಮತ್ತು ಅಧಿಕಾರಿಗಳಿರುವ ಎಡಿಆರ್ ನಂಥ ಸಂಸ್ಥೆಗಳು ಇಂಥ ಕೆಲಸಗಳನ್ನು ಮಾಡುತ್ತಿರುವುದು ಸಮಾಧಾನ ಕೊಡುವ ಸಂಗತಿಯಾಗಿದೆ.
- ಪುರುಷೋತ್ತಮ ಬಿಳಿಮಲೆ, ಹಿರಿಯ ವಿದ್ವಾಂಸರು




