ಖಾಸಗಿ ಕ್ಷಣಗಳ ಫೋಟೋ ಸಂಗ್ರಹಿಸಿದ್ದವನ ಬಂಧನ

2 years ago

#arrest #collecting #photos #private #moments

ಬೆಂಗಳೂರು: ಸ್ನೇಹಿತೆ, ಮಹಿಳಾ ಸಹೋದ್ಯೋಗಿಗಳು ಸೇರಿ ಹಲವು ಮಹಿಳೆಯರ 13 ಸಾವಿರಕ್ಕೂ ಹೆಚ್ಚು ನಗ್ನ ಫೋಟೋಗಳನ್ನು ಮೊಬೈಲ್ನಲ್ಲಿ ಸೇವ್ ಮಾಡಿಕೊಂಡಿದ್ದ ಕಾಮುಕನೊಬ್ಬನನ್ನು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ಳಂದೂರಿನ ಬಿಪಿಒ ಕಂಪನಿಯಲ್ಲಿ ಗ್ರಾಹಕ ಸೇವಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಆದಿತ್ಯ ಸಂತೋಷ (25) ಬಂಧಿತ ಆರೋಪಿ. ಆರೋಪಿ ಕಳೆದ ನಾಲ್ಕು ತಿಂಗಳಿನಿಂದ 22 ವರ್ಷದ ಮಹಿಳಾ ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದ. ಈ ಮಹಿಳೆಯ ಜೊತೆಗಿನ ಕೆಲವು ಖಾಸಗಿ ಕ್ಷಣಗಳನ್ನು ಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ.

ಈ ಫೋಟೋಗಳನ್ನು ಅಳಿಸಲು ಮಹಿಳೆ ಆರೋಪಿ ಆದಿತ್ಯ ಸಂತೋಷ್ನ ಫೋನ್ ತೆಗೆದುಕೊಂಡು ಗ್ಯಾಲರಿಗೆ ಹೋದಾಗ, ತನ್ನ ಹಾಗೂ ಸಹೋದ್ಯೋಗಿಗಳು ಸೇರಿದಂತೆ ಹಲವು ಮಹಿಳೆಯರ ನಗ್ನ ಫೋಟೋಗಳನ್ನು ಕಂಡು ಆಘಾತಕ್ಕೊಳಗಾಗಿ ಕೂಡಲೇ ಸಂಸ್ಥೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ಬಳಿಕ ನವೆಂಬರ್ 23ರಂದು ಸಂಸ್ಥೆಯ ವಕೀಲರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಯಾವ ಉದ್ದೇಶದಿಂದ ಫೋಟೋ ಸಂಗ್ರಹಿಸಿದ್ದ ನಮಗೆ ತಿಳಿದಿಲ್ಲ. ಇದು ಸಂಸ್ಥೆಯ ಸಿಬ್ಬಂದಿಗೆ ಆಘಾತವನ್ನುಂಟು ಮಾಡಿದ್ದು, ವಿಷಯ ತಿಳಿದ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇವೆ ಎಂದಿದ್ದಾರೆ.

ಸಂತೋಷ್ ಕಳೆದ 5 ತಿಂಗಳಿಂದ ಇದೇ ಕಚೇರಿಯಲ್ಲಿ ಗ್ರಾಹಕ ಸೇವಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತ ತನ್ನ ಸಂತೋಷಕ್ಕಾಗಿ ಫೋಟೋಗಳನ್ನು ಸಂಗ್ರಹಿಸಿ ಎಡಿಟ್ ಮಾಡುತ್ತಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಆರೋಪಿ ಈ ಫೋಟೋಗಳನ್ನು ವೈರಲ್ ಮಾಡಿದ್ದಾನೆಯೇ ಅಥವಾ ಅವುಗಳನ್ನು ಬಳಸಿಕೊಂಡು ಮಹಿಳೆಯರಿಗೆ ಬ್ಲ್ಯಾಕ್ಮೇಲ್ ಮಾಡಿದ್ದಾನೆಯೇ ಎಂಬ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿತಿಳಿಸಿದ್ದಾರೆ.

ಪೊಲೀಸರು ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು), 67 (ಎ) (ಲೈಂಗಿಕವಾಗಿ ಅಶ್ಲೀಲ ಕೃತ್ಯವನ್ನು ಹೊಂದಿರುವ ವಸ್ತುಗಳನ್ನು ಪ್ರಕಟಿಸುವುದು ಅಥವಾ ರವಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply