ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಧಾರವಾಡ: ಧಾರವಾಡ ರಂಗಾಯಣಕ್ಕೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ 3 ಜನ ತಂತ್ರಜ್ಞರ ಹಾಗೂ 12 ಜನ ಕಲಾವಿದರನ್ನು ನೇಮಕ ಮಾಡಿಕೊಂಡು ರೆಪರ್ಟರಿ ಪ್ರಾರಂಭಿಸಲು ಅರ್ಜಿಗಳ ಅವಧಿಯನ್ನು ವಿಸ್ತರಿಸಿದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ತಂತ್ರಜ್ಞರಿಗೆ ಮಾಸಿಕ ರೂ, 25,000/- ಹಾಗೂ ಕಲಾವಿದರಿಗೆ ರೂ, 18,000/- ಗಳ ಕ್ರೋಡೀಕೃತ ಗೌರವ ಸಂಭಾವನೆ ನೀಡಲಾಗುವುದು. ರಂಗಾನುಭವದ ಜೊತೆ ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆದ್ಯತೆ ನೀಡಲಾಗುವುದು.
18 ರಿಂದ 25 ವರ್ಷದೊಳಗಿನ ಅನುಭವವುಳ್ಳ ಆಸಕ್ತರು ರಂಗಾಯಣ ಹಾಗೂ ಫೇಸ್‍ಬುಕ್ ಪೇಜ್‍ನಲ್ಲಿ ಅರ್ಜಿಗಳನ್ನು ಪಡೆದು ದಿನಾಂಕ:07-07-2025 ಸಂಜೆ 5.00 ಗಂಟೆಯ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ ಪಂ.ಬಸವರಾಜ ಬಯಲು ರಂಗಮಂದಿರ, ಕಾಲೇಜು ರಸ್ತೆ, ಧಾರವಾಡ-580001 ಈ ವಿಳಾಸಕ್ಕೆ ಮುದ್ದಾಂ, ಅಂಚೆ ಮೂಲಕ ಅಥವಾ ಇಮೇಲ್ (dharwadrangayana@gmail.com) ಮೂಲಕ ಕಳುಹಿಸಬಹುದು.




