ಬೆಂಗಳೂರು: ಬೆಂಗಳೂರಿನ ಗ್ಯೊಥೆ ಇನ್ಸ್ಟಿಟ್ಯೂಟ್ / ಮ್ಯಾಕ್ಸ್ ಮುಲ್ಲರ್ ಭವನ್ ತನ್ನ ‘ಕಿಂಡರ್ ಕಥಾ’ ಯೋಜನೆಯಡಿ ನವಕರ್ನಾಟಕ ಪ್ರಕಾಶನದ ಸಹಯೋಗದೊಂದಿಗೆ ಕನ್ನಡದಲ್ಲಿ ಮಕ್ಕಳ ಸಚಿತ್ರ ಪುಸ್ತಕಗಳನ್ನು ಹೊರತರಲು ಉದ್ದೇಶಿಸಿದೆ. ಈ ಸಂಬಂಧ ಲೇಖಕರಿಂದ ಮತ್ತು ಚಿತ್ರಕಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ಆಸಕ್ತ ಲೇಖಕರು/ಚಿತ್ರಕಾರರು ಭಾಗವಹಿಸಬಹುದು.
ಉದ್ದೇಶಿತ ಕೃತಿಯ ವಿವರಗಳು, ಬರಹ ಹಾಗೂ ಚಿತ್ರಗಳನ್ನು kinderkatha-bangalore@goethe.de ವಿಳಾಸಕ್ಕೆ ಇಮೇಲ್ ಮೂಲಕ ಕಳಿಸಬೇಕು. ಕೊನೆಯ ದಿನಾಂಕ ಜನವರಿ 31, 2022. ಹಸ್ತಪ್ರತಿ ಮತ್ತು ಚಿತ್ರಗಳ ಆಯ್ಕೆಯಲ್ಲಿ ಸಂಪಾದಕ ಮಂಡಲಿಯ ತೀರ್ಮಾನವೇ ಅಂತಿಮವಾಗಿರುತ್ತದೆ.



