ಶಿವಮೊಗ್ಗ: ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಪ್ರವಾಸಿ ಸಂಪನ್ಮೂಲಗಳ ಬಗ್ಗೆ ಜ್ಞಾನ ಮತ್ತು ಅನುಭವವಿರುವ ಪ್ರವಾಸಿ ಮಾರ್ಗದರ್ಶಿಗಳ ಹುದ್ದೆಗೆ 2ನೇ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ 21 ರಿಂದ 45 ವರ್ಷದೊಳಗಿನ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹಾಗೂ ಪ್ರಚಾರ ಪಡಿಸುವ ಉದ್ದೇಶದಿಂದ ದೇಶ/ವಿದೇಶಿ ಪ್ರವಾಸಿಗರಿಗೆ ನೀಡಲು “ಒಂದು ರಾಜ್ಯ-ಹಲವು ವಿಸ್ಮಯಗಳು” ಎಂಬುದನ್ನು ಪರಿಚಯಿಸುವುದರ ಮೂಲಕ ಜಿಲ್ಲೆಯ ಭವ್ಯ ಸಂಸ್ಕೃತಿ, ವೈವಿಧ್ಯತೆಗಳ ವಿಭಿನ್ನ ಕಲೆ-ವಾಸ್ತುಶಿಲ್ಪ ಹಾಗೂ ಜಿಲ್ಲೆಯ ಸಮಗ್ರತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವಿಧ ಆಯಾಮಗಳ ಮೂಲಕ ಪ್ರವಾಸಿಗರನ್ನು ಸೆಳೆಯುವಂತಿರಬೇಕು.
- 40 ದಾಟಿದ ಪುರುಷರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಹೇಗೆ?
- ಸಂಗೀತ ಬಾರ್ & ರೆಸ್ಟೋರೆಂಟ್ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ನಿಗದಿ
- ಅನರ್ಹ ಕಂಪನಿಗೆ ಕಸದ ಟೆಂಡರ್: ಆರ್.ಅಶೋಕ
- ಮಾಂಜಾ ದಾರ ಮಾರಾಟ, ಬಳಕೆ ನಿಷೇಧಕ್ಕೆ ಕಠಿಣ ಕ್ರಮ: ಡಾ.ಜಿ.ಪರಮೇಶ್ವರ್
- ಶೂದ್ರ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಪ್ರವಾಸೋದ್ಯಮ ಇಲಾಖೆ, ‘ಎ’ ಬ್ಲಾಕ್ 3ನೇ ತಿರುವು, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇಲ್ಲಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿದ ಜುಲೈ 25 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯನ್ನು ಖುದ್ದಾಗಿ ಅಥವಾ ದೂ.ಸಂ.: 08182-251444 / 7019740132 ಗಳನ್ನು ಸಂಪರ್ಕಿಸಬಹುದು.




