ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನ

3 years ago

#Application #Invitation #Agniveer #Air #Force #Posts #employment

ದೆಹಲಿ: ಭಾರತೀಯ ವಾಯುಪಡೆ ಅಗ್ನಿವೀರ್ ವಾಯು ನೇಮಕಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 27ರಿಂದ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಲಿದ್ದು ಆಗಸ್ಟ್ 17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.  ಈ ವರ್ಷ 4,165 ಹುದ್ದೆಗಳಿಗೆ ನೇಮಕ ನಡೆಯಲಿದೆ. ಮಹಿಳೆಯರಿಗೆ 833 ಹುದ್ದೆಗಳು ಮೀಸಲಾಗಿವೆ‌.

ಈ ಸಂಬಂಧ ಭಾರತೀಯ ವಾಯುಪಡೆ ಅಧಿಸೂಚನೆ ಹೊರಡಿಸಿದೆ. ನೇಮಕಾತಿಗಾಗಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದ್ದು ಅಕ್ಟೋಬರ್ 13ರಿಂದ ಆನ್‌ಲೈನ್‌ ಪರೀಕ್ಷೆ ಆರಂಭವಾಗಲಿದೆ‌.

ಆಯ್ಕೆ ಪರೀಕ್ಷೆಯು ಐಎಎಫ್‌ನ ‘ಅಗ್ನಿವೀರ್ ವಾಯು’ ಆಗಲು ಮಾತ್ರ. ಉಳಿದಂತೆ ಕಮಿಷನ್ ಆಫೀಸರ್‌ಗಳು/ಪೈಲಟ್‌ಗಳು / ನ್ಯಾವಿಗೇಟರ್‌ಗಳು /ಏರ್‌ಮೆನ್ ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅವಕಾಶವಿಲ್ಲ.

ಅರ್ಜಿ ಸಲ್ಲಿಸಲು ಅರ್ಹತೆ

ಶೈಕ್ಷಣಿಕ ಮತ್ತು ದೈಹಿಕ ಅರ್ಹತೆಗಳನ್ನು ಪೂರೈಸಿರುವ ಎಲ್ಲಾ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಕೊಂಡಿಗಳನ್ನು ಸಂಪರ್ಕಿಸಬಹುದು.

https://agnipathvayu.cdac.in/
https://indianairforce.nic.in

Leave a Reply