ಶಿವಮೊಗ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು 2024-25 ಸಾಲಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ಎರಡು ವರ್ಷಗಳ ತರಬೇತಿಗಾಗಿ ಪರಿಶಿಷ್ಟ ಜಾತಿಯ ಅರ್ಹ ಕಾನೂನು ಪದವೀಧರರಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲೆಯವರಾಗಿದ್ದು, ಪ.ಜಾ.ಗೆ ಸೇರಿದವರಾಗಿರಬೇಕು. ಕಾನೂನು ಪದವಿ ಪಡೆದು 2 ವರ್ಷಗಳ ಒಳಗಿರಬೇಕು. ಆಯ್ಕೆಯಾದವರಿಗೆ ಪ್ರತಿ ಮಾಹೆ ಹತ್ತು ಸಾವಿರ ರೂ.ಗಳ ಶಿಷ್ಯವೇತನ ನೀಡಲಾಗುವುದು.
ಆಸಕ್ತರು ಇಲಾಖೆಯ ವೆಬ್ಸೈಟ್ WWW.SW.KAR.NIC.IN ರ ಮೂಲಕ ಜುಲೈ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೃಥ್ವಿ ಮ್ಯಾನ್ಷನ್, ವಿನೋಬನಗರ, 100 ಅಡಿರಸ್ತೆ, ಶಿವಮೊಗ್ಗ ಇಲ್ಲಿಗೆ ಖುದ್ದಾಗಿ ಅಥವಾ ವೆಬ್ಸೈಟ್ ಅಥವಾ ದೂ.ಸಂ.: 08182-249241 ನ್ನು ಸಂಪರ್ಕಿಸಬಹುದು.




