ದಾವಣಗೆರೆ: ಜಿಲ್ಲಾ ವ್ಯಾಪ್ತಿಯಲ್ಲಿ 206 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಪ್ರಸ್ತುತ ಖಾಲಿ ಇರುವ 16 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆ ನೇಮಕ ಮಾಡಿಕೊಳ್ಳಲು ಜೂ.29 ರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಖಾಲಿ ಇರುವ ಹುದ್ದೆಗಳು: ರಾಜಗೊಂಡನಹಳ್ಳಿ , ಬೇತೂರು, ಕೊಂಡಜ್ಜಿ, ಹೆಬ್ಬಾಳು , ಕಬ್ಬಳ, ಉಕ್ಕಡಗಾತ್ರಿ, ಹಳೆಬಾತಿ, ಪಾಂಡೋಮಟ್ಟಿ, ಕಂದನಕೋವಿ, ಕಕ್ಕರಗೊಳ್ಳ, ಬನ್ನಿಕೋಡು, ವಡೆಯರಹತ್ತೂರು, ಓಬನ್ನನಹಳ್ಳಿ(ನರಗನಹಳ್ಳಿ), ದೊಡ್ಡಬ್ಬಿಹೆರೆ , ಅಣಜಿ , ಗುಡಾಳು ಇಲ್ಲಿ ಖಾಲಿ ಇರುತ್ತವೆ.
ಆಸಕ್ತ ಆಭ್ಯರ್ಥಿಗಳು ದಾಖಲೆಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ವೆಬ್ಸೈಟ್ davanagere.nic.in ಮೂಲಕ ಅರ್ಜಿ ಸಲ್ಲಿಸಿ ನಂತರ ಸ್ವೀಕೃತಿ ಪತ್ರದ ಪ್ರತಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಪಂಚಾಯತ್ ಕಚೇರಿ ಆಡಳಿತ ವಿಭಾಗದ ಕೊಠಡಿ ಸಂ.25 ಗೆ ಜುಲೈ 20 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಖ್ಯೆ 08192-226655 ಗೆ ಕರೆ ಮಾಡಬಹುದು.




