ಅಣ್ಣಿಗೇರಿ ಪಟ್ಟಣ :ಎರಡು ಕರ್ನಾಟಕ ಒನ್ ಕೇಂದ್ರಗಳಿಗೆ ಅರ್ಜಿ ಆಹ್ವಾನ

2 years ago

ಧಾರವಾಡ: ಇ.ಡಿ.ಸಿ.ಎಸ್ ನಿರ್ದೇಶನಾಲಯ, ಇ-ಆಡಳಿತ ಇಲಾಖೆಯಿಂದ ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಕರ್ನಾಟಕ ಒನ್ 2 ಕೇಂದ್ರಗಳಿಗೆ ಪ್ರಾಂಜೇಸಿಗಾಗಿ ಫ್ರಾಂಚೈಸಿಗಳನ್ನು ಆಯ್ಕೆ ಮಾಡಲು ಆನ್‍ಲೈನ್ (https://www.karnatakaone.gov.in/Public/FranchiseeTerms)  ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪ್ರಾಂಚೈಸಿ ಆಯ್ಕೆಗಾಗಿ ಪಿ.ಯು.ಸಿ, ಐ.ಟಿ.ಐ, ಡಿಪ್ಲೊಮಾ, ಪದವಿ, ಸ್ನಾತ್ತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ಜ್ಞಾನ, ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಕನಿಷ್ಠ 100 ಚದರ ಅಡಿ ವಿಸ್ತೀರ್ಣವುಳ್ಳ ಸುಸಜ್ಜಿತ ಕಟ್ಟಡದೊಂದಿಗೆ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಬಯೋಮೆಟ್ರಿಕ ಡಿವೈಸ್ ಮತ್ತು 8 ಗಂಟೆಗಳ ವಿದ್ಯುತ್ ಪರ್ಯಾಯ ವ್ಯವಸ್ಥೆ ಹಾಗೂ ಈಗಾಗಲೇ ಸರಕಾರದಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಒನ್ ಕೇಂದ್ರದಿಂದ ಅಂತರ 2 ಕಿ.ಮೀ ಹಾಗೂ ಅರ್ಜಿದಾರರು ಕೇಂದ್ರವನ್ನು ಸ್ಥಾಪಿಸಲು ಒಂದಕ್ಕಿಂತ ಹೆಚ್ಚು ಸ್ಥಳಗಳನ್ನು ಗುರುತಿಸಿದಲ್ಲಿ ಜಿಲ್ಲಾ ಕಾರ್ಯಪಡೆಯ ನಿರ್ಣಯ  ಅಂತಿಮ  ಇರುವ ಮಾನದಂಡಗಳಿಗೆ ಬದ್ಧರಾಗಿರುವವರು ಅರ್ಜಿಯನ್ನು ಜನವರಿ 02, 2014 ರೊಳಗೆ ಸಲ್ಲಿಸಬಹುದಾಗಿದೆ.
 
ಮಾನದಂಡಳಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹೆಲ್ಪ್ ಡೆಸ್ಕ್ ಮೊಬೈಲ್ ಸಂಖ್ಯೆ 080-49203888, 8904085030 ಗೆ ಸಂಪರ್ಕಿಸಬಹುದು. ಹಾಗೂ ವಲಯ ಕೋಆರ್ಡಿನೇಟರ್ ಆಗಿರುವ ಅನೀಸ್ ಅಹಮದ್ ಅವರನ್ನು-9845220135 amkl@karnataka.gov.in ಸಂಪರ್ಕಿಸಬಹುದು.

Leave a Reply