ದೆಹಲಿ: ಬಾಳೇ ಬಂಗಾರ ಸಾಕ್ಷ್ಯಚಿತ್ರಕ್ಕೆ ನಟ ಅನಿರುದ್ಧ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರಿಂದ ಪ್ರಶಸ್ತಿ ಸ್ವೀಕರಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಅವರು ಸಂತಸ ಹಂಚಿಕೊಂಡಿದ್ದು, 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನಾನ್ ಫೀಚರ್ (ಸ್ಪೆಷಲ್ ಮೆನ್ಷನ್) ವಿಭಾಗದಲ್ಲಿ ‘ಪದ್ಮಶ್ರೀ’ಪುರಸ್ಕೃತೆ ಡಾ.ಭಾರತಿ ವಿಷ್ಣುವರ್ಧನ್ ಅವರ ಜೀವನದ ಕುರಿತ ‘ಬಾಳೇ ಬಂಗಾರ’ಸಾಕ್ಷ್ಯಚಿತ್ರದ ನಿರ್ದೇಶನಕ್ಕಾಗಿ ನನಗೆ ಬಂದ ಈ ‘ರಾಷ್ಟ್ರೀಯ ಪ್ರಶಸ್ತಿ’ಗೆ ನಾನು ಭಾರತಿ ಅಮ್ಮನ ಸಾಧನೆ ಹಾಗೂ ಅವರು ನನಗೆ ಈ ಸಾಕ್ಯಚಿತ್ರ ಮಾಡಲು ಕೊಟ್ಟ ಒಪ್ಪಿಗೆ, ನನ್ನ ಅರ್ಧಾಂಗಿ ಕೀರ್ತಿ ಅವರ ನಿರ್ಮಾಣ ಸಂಸ್ಥೆ ಕೀರ್ತಿ ಇನ್ನೋವೇಶನ್ಸ್ ನ ಪ್ರತಿಯೊಬ್ಬರ ಸಹಕಾರ, ನನ್ನ ತಾಯಿ ಮತ್ತು ನನ್ನ ಕುಟುಂಬದವರ ಬೆಂಬಲ ಹಾಗೂ ನನ್ನ ಬೃಹತ್ ಕುಟುಂಬದವರಾದ ತಮ್ಮೆಲ್ಲರ ಪ್ರೋತ್ಸಾಹ, ಹಾರೈಕೆ, ಪ್ರಾರ್ಥನೆ ಮತ್ತು ಆಶೀರ್ವಾದವೇ ಕಾರಣ. ಎಲ್ಲರಿಗೂ ಕೋಟಿ ಕೋಟಿ ಧನ್ಯವಾದಗಳು, ನಮನಗಳು ಎಂದಿದ್ದಾರೆ.




