ಜೀವನದ ಅನಿರೀಕ್ಷಿತ ತಿರುವುಗಳು ಬದುಕಿನ ಗತಿಯನ್ನೇ ಬದಲಿಸಿ, ಭಗವಂತನೂ ಕಲಿಸದ ಪಾಠವನ್ನು ಕಲಿಸಿಬಿಡುತ್ತವೆ. ಇಂತಹ ತಾತ್ವಿಕ ಎಳೆಯೊಂದು, ಕುತೂಹಲ ಹಿಡಿದಿಟ್ಟುಕೊಂಡು ಹೇಗೆ ಎಳೆಎಳೆಯಾಗಿ ರಹಸ್ಯ ಬಿಚ್ಚಿಕೊಳ್ಳುತ್ತ ಸಾಗುತ್ತದೆ ಎಂಬುದನ್ನು ನಿರೂಪಿಸುವುದೇ, “ಅನಿರೀಕ್ಷಿತ”ಚಿತ್ರದ ಕಥಾಹಂದರ ಎಂದು ಚಿತ್ರ ತಂಡ ಕಥೆಯ ಸಾರಾಂಶದ ಕುರಿತು ಹೇಳಿಕೊಂಡಿದೆ.
ಐವತ್ತೈದು ವರ್ಷದಾಟಿ, ಇನ್ನೇನು ರಿಟೈರ್ ಮೆಂಟಿಗೆ ಹತ್ತಿರವಿರುವ ಬೇಜವಾಬ್ಧಾರಿ, ಉಡಾಫೆ ಮನಸ್ಥಿತಿಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬ, ತನ್ನ ಬದುಕಿನ ಮಧ್ಯಂತರದಲ್ಲಿ, ತನ್ನಇಲಾಖೆಯ ಸೇವೆಯಲ್ಲಿರುವಾಗ ತಮ್ಮ ಸುಪರ್ದಿಗೆ ಬರುವ ಕೇಸೊಂದರ ಜಾಡು ಹಿಡಿದು, ಅದರ ರಹಸ್ಯದ ಪರಿಣಾಮ ಬೀರಿದಂತೆಲ್ಲ ಅದರೊಂದಿಗೆ ತಳುಕು ಹಾಕಿಕೊಂಡ ತನ್ನ ಜೀವನದ ಘಟನೆಗಳಿಗೆ ಹೋಲಿಕೆಯಾಗುವುದರೊಂದಿಗೆ, ತನ್ನ ಬದುಕಿನ ಘಟನೆಗಳ ಮೆಲುಕಿನೊಂದಿಗೆ ತನ್ನ ತಪ್ಪಿನ ಅರಿವಾಗಿ, ತನ್ನ ಬೇಜವಾಬ್ಧಾರಿತನಗಳಿಗೆ ಮತ್ತು ಉಡಾಫೆಯಯ ಬದುಕಿಗೆ ಭವಿಷ್ಯದಲ್ಲಿ, ಉತ್ತರಕಂಡುಕೊಂಡು, ಪಶ್ಚಾತ್ತಾಪದಿಂದ ಪವಿತ್ರವಾಗಿ ಪ್ರಾಯಶ್ಚಿಕ್ಕೊಳಗಾಗುವುದೇ “ಅನಿರೀಕ್ಷಿತ”ಚಿತ್ರದ ಸಂಪೂರ್ಣಕಥಾ ಸಾರಾಂಶ.

ಚಿತ್ರದ ಸೃಷ್ಠಿ
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಊಹೆಗೂ ನಿಲುಕದ ಅನಿರೀಕ್ಷಿತ ತಿರುವುಗಳು ಜೀವನದಲ್ಲಿ ಮಹತ್ತರವಾದ ತಿರುವುಗಳನ್ನು ಸೃಷ್ಠಿ ಮಾಡಿ ಬಿಡುತ್ತವೆ. ಹಾಗೇ ಅನಿರೀಕ್ಷಿತವಾದ ಸಂಭವಗಳಿಂದ, ಅನಿರೀಕ್ಷಿತ ನಿರ್ಧಾರಗಳಿಂದ ಆದ, ಅನಿರೀಕ್ಷಿತ ಬದಲಾವಣೆಯ ಮಹತ್ವದ ಸಾಧನೆಯೇ“ಅನಿರೀಕ್ಷಿತ”ಸಿನೆಮಾದ ಸೃಷ್ಠಿ. ಅನಿರೀಕ್ಷಿತ ಲಾಕ್‌ಡೌನ್ ಸಮಯದಲ್ಲಿ, ಹದಿಮೂರು ಜನ ಕ್ರಿಯಾಶೀಲ ಹಾಗೂ ಪ್ರತಿಭಾವಂತರ ತಂಡ, ಒಂದೇ ಚಿತ್ರೀಕರಣ ಸ್ಥಳದಲ್ಲಿ, ಅದನ್ನೆ ನಾಲ್ಕು ಲೊಕೇಷನ್ ಗಳಂತೆ ಬಳಸಿ, ಕೇವಲ ಇಬ್ಬರೇ ಕಲಾವಿದರೊಂದಿಗೆ, ಭಾವನಾತ್ಮಕವಾದ ಮತ್ತು ತಾತ್ವಿಕವಾದ ಕಥೆಯ ಹಂದರವನ್ನು ವಿಭಿನ್ನ ಕುತೂಹಲಕಾರಿಯಾದ ನಿರೂಪಣೆಯೊಂದಿಗೆ, ಬಹಳಷ್ಟು ಬದಲಾವಣೆಯೊಂದಿಗೆ, ಹಲವಾರು ಪ್ರಯೋಗಗಳೊಂದಿಗೆ, ಲಾಕ್‌ಡೌನ್ ಸಮಯವನ್ನೂ ಕೂಡ ಸುಮ್ಮನಿರದೆ ಸದುಪಯೋಗ ಮಾಡಿಕೊಂಡು, ಎಲ್ಲಾ ಮುನ್ನೆಚ್ಚರಿಕೆಗಳನ್ನೂ ವಹಿಸಿ, ಚಿತ್ರೀಕರಣ ಮಾಡಿ, ಸಿನೆಮಾ ನಿರ್ಮಾಣದ ಎಲ್ಲಾ ಕೆಲಸ ಮುಗಿಸಿಕೊಂಡು, ಬಿಡುಗಡೆಗೆ ಸಿದ್ಧಮಾಡಿರುವ ಹೊಸ ಪ್ರಯತ್ನವೇ“ಅನಿರೀಕ್ಷಿತ”ಚಿತ್ರದ ಸಾಧನೆಯ ರಹಸ್ಯ.

ಚಿತ್ರತಂಡದಲ್ಲಿ ಕ್ರಿಯಾಶೀಲ ಹಾಗೂ ಪ್ರತಿಭಾವಂತ ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಚಿತ್ರದ ತಾಂತ್ರಿಕ ವಿನ್ಯಾಸದ ಜವಾಬ್ಧಾರಿ ವಹಿಸಿಕೊಂಡು ಇಡೀ ಸಿನೆಮಾದ ನಿರ್ಮಾಣ ವಿನ್ಯಾಸ ವಿಭಿನ್ನವಾಗಿ ನಿರ್ವಹಿಸಿದ್ದಾರೆ.
ಬಹಳಷ್ಟು ಯಶಸ್ವಿ ಸಿನೆಮಾಗಳಿಗೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕರಾದ ಗುರುಕಿರಣ್ ಅನಿರೀಕ್ಷಿತ ಚಿತ್ರದ ಸಂಗೀತಕ್ಕಾಗಿ ವಿಭಿನ್ನ ಶೈಲಿಯ ನಿರೂಪಣೆ ಬಳಸಿ ಇಡೀ ಚಿತ್ರದ ಕುತೂಹಲ ಮತ್ತು ಘಟನೆಗಳನ್ನು ಬೆಚ್ಚಿಬೀಳಿಸುವ ಹಾಗು ಮನಮಟ್ಟುವ ಭಾವುಕತೆಗಳ ಸ್ಪರ್ಶಕ್ಕೆ ತಮ್ಮದೇ ಆದ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ.
ಸಿನೆಮಾಟೋಗ್ರಾಫರ್ ಆಗಿ ಜೀವನ್ ಗೌಡ ಇರುವಷ್ಟೇ ನೆರಳು ಬೆಳಕು ಬಳಸಿಕೊಂಡು, ಸಿಕ್ಕಷ್ಟೆ ವಾತಾವರಣ, ಇದ್ದಷ್ಟೇ ತಂತ್ರಜ್ಞರನ್ನು ಬಳಸಿ ಅದರಲ್ಲೂ ಯಾವುದೇ ಸಿನೆಮಾದ ಕ್ವಾಲಿಟಿಗೂ ಕಮ್ಮಿಯಿಲ್ಲದಂತೆ ಇದ್ದಷ್ಟೇ ಮಿತಿಯಲ್ಲಿಯೇ ಚಿತ್ರೀಕರಣ ಮಾಡಿಕೊಟ್ಟಿದ್ದಾರೆ.
ಸಂಕಲನಕಾರರಾಗಿ ರಘು ಚಿತ್ರದ ಕಥೆಯ ಓಟ ಚಿತ್ರದ ಓಘಕ್ಕೆ ತಮ್ಮ ಹಿಡಿತದ ಇತಿಮಿತಿಯ ಬ್ರೇಕ್ ಎಕ್ಸಿಲೇಟರ್ ಬಳಸಿ ಇಡೀಚಿತ್ರದ ವೇಗದ ಮಿತಿ ಹೆಚ್ಚಿಸಿದ್ದಾರೆ.
ಅಂತಿಮವಾಗಿ ಇಡೀ ಚಿತ್ರದ ತುಂಬಾ ಆವರಿಸಿಕೊಳ್ಳುವುದು ಚಿತ್ರದ ನಟ ನಿರ್ದೇಶಕರಾಗಿ ಮಿಮಿಕ್ರಿ ದಯಾನಂದ್. ಅವರು ತಮಗೆ ಯಾವುದೇ ಜವಾಬ್ಧಾರಿ ವಹಿಸಿದರೂ ತಮ್ಮ ಕೆಲಸದ ತಲ್ಲೀನತೆ ಎಷ್ಟಿರುತ್ತದೆ ಮತ್ತು ತಾನೆಷ್ಟು ಕ್ರಿಯಾಶೀಲ ಎಂಬುದನ್ನು ಈ ಚಿತ್ರದ ಮೂಲಕ ಸಾಬೀತುಗೊಳಿಸಿದ್ದಾರೆ.
ಅನಿರೀಕ್ಷಿತ ಚಿತ್ರದ ಮೊದಲ ಪೋಸ್ಟರ್ ಅನ್ನು 23-06-2021 ರಂದು ಬೆಳಿಗ್ಗೆ ಹನ್ನೊಂದು ಘಂಟೆಗೆ ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆಗೊಳಿಸಿದರು. ಚಿತ್ರದ ಎರಡನೇ ಪೋಸ್ಟ ಅನ್ನು ಗಿರಿಜಾ ಲೋಕೇಶ್‌ಬಿಡುಗಡೆಗೊಳಿಸಿದರು. ಮೂರನೆಯ ಪೋಸ್ಟರನ್ನು ಸಂಗೀತ ನಿರ್ದೇಶಕರಾದ ಗುರುಕಿರಣ್‌ಬಿಡುಗಡೆಗೊಳಿಸಿದರು.

ಚಿತ್ರತಂಡ ಸಿನೆಮಾದ ಎಲ್ಲಾ ಕೆಲಸಗಳನ್ನು ಸಂಪೂರ್ಣ ಮುಗಿಸಿಕೊಂಡಿ,ದ್ದು ಸದ್ಯದಲ್ಲಿಯೇ ಚಿತ್ರದ ಟ್ರೇಲರನ್ನು ಬಿಡುಗಡೆಗೊಳಿಸಲಿದ್ದಾರೆ ಹಾಗೂ ಸರಿಯಾದ ವೇದಿಕೆ ಸೃಷ್ಠಿ ಮಾಡಿಕೊಂಡು ಚಿತ್ರವನ್ನು ಚಿತ್ರಮಂದಿರಗಳಲ್ಲಿ ಹಾಗೂ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ತಂತ್ರಜ್ಞರು
- ಶೀರ್ಷಿಕೆ : “ಅನಿರೀಕ್ಷಿತ”
- ನಿರ್ಮಾಣ ಸಂಸ್ಥೆ : ಎಸ್.ಕೆ. ಟಾಕೀಸ್
- ನಿರ್ಮಾಪಕರು : ಶಾಂತಕುಮಾರ್
- ಸಹ-ನಿರ್ಮಾಪಕರು: ಸಂತೋಷ್‌ಕೊಡಂಕೇರಿ, ರಘು ಎಸ್, ಮಿಮಿಕ್ರಿ ದಯಾನಂದ್
- ಕಥೆ-ನಿರ್ದೇಶನ: ಮಿಮಿಕ್ರಿದಯಾನಂದ್
- ಛಾಯಾಗ್ರಹಣ : ಜೀವನ್‌ಗೌಡ
- ಸಂಕಲನ : ರಘು ಎಸ್
- ಸಂಗೀತ ನಿರ್ದೇಶನ : ಗುರುಕಿರಣ್
- ಚಿತ್ರಕಥೆ-ಸಂಭಾಷಣೆ: ನೆಳ್ಳುಳ್ಳಿ ರಾಜಶೇಖರನ್
- ಪತ್ರಿಕಾ ಸಂಪರ್ಕ: ಸುಧೀಂದ್ರ ವೆಂಕಟ್
ಕಲಾವಿದರು:ಮಿಮಿಕ್ರಿದಯಾನಂದ್
ಭಾಮಾ
