ಉರ್ವಸ್ಟೋರ್ ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

3 years ago

ಮಂಗಳೂರು: ದಲಿತ ಹಕ್ಕುಗಳ ಹೋರಾಟ ಸಮಿತಿ, ಡಿವೈಎಫ್ಐ ಮತ್ತು ಸಿಪಿಎಂ ಉರ್ವ ಸ್ಟೋರ್ ಘಟಕದ ನೇತೃತ್ವದಲ್ಲಿ ಡಿವೈಎಫ್ಐ ಕಚೇರಿಯಲ್ಲಿ ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು, ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯದ ನಾಯಕರನ್ನಾಗಿ ಮಾಡಲು ಆಳುವ ವರ್ಗ ಹೊರಟಿದೆ ಆದರೆ ಅಂಬೇಡ್ಕರ್ ಅವರು ಸಮಸ್ತ ಮನುಕುಲದ ಏಳಿಗೆಗಾಗಿ ದುಡಿದವರು. ಜಗತ್ಪ್ರಸಿದ್ದ ಮೇಧಾವಿಗಳಾದ ಅಂಬೇಡ್ಕರ್ ರವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಕಟಿಬದ್ದರಾಗಿ ದುಡಿಯಬೇಕೆಂದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರುಗಳಾದ ರಘುವೀರ್ ಸುಧಾಕರ್ ರಾಜೇಶ್ ಕುಲಾಲ್ ಮನೋಜ್ ಇಕ್ಬಾಲ್ ಸಹಜ್ ಪ್ರಶಾಂತ್ ಆಚಾರ್ ನಾಗೇಂದ್ರ ಸರೋಜಾ ಮುಂತಾದವರು ಭಾಗವಹಿಸಿದ್ದರು.

Leave a Reply