ಧಾರವಾಡ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ನಮ್ಮ ಹೆಮ್ಮೆ. ಅದರೊಂದಿಗೆ ನಮ್ಮ ಕುಟುಂಬಕ್ಕೂ ಆದ್ಯತೆ ನೀಡಬೇಕು. ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣಗಳಿಗೆ ಮಹತ್ವ ನೀಡಬೇಕು ಎಂದು ನಿವೃತ್ತ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಶಂಕರ ರಾಗಿ ಹೇಳಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಮೀಸಲು ಪೊಲೀಸ್ ಪಡೆಯ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಮತ್ತು ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿ, ಸಿಬ್ಬಂದಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಅವರ ಸೇವೆಗೆ ತಕ್ಕ ಸೌಲಭ್ಯಗಳು ಸೀಗಬೇಕು. ಸರಕಾರ ಪೊಲೀಸರ ಸಮಸ್ಯೆಗಳಿಗೆ, ಮೂಲಸೌಕರ್ಯಗಳಿಗೆ ಕಿವಿ ಆಗಬೇಕು ಎಂದರು.
ನಮ್ಮನ್ನು ನಂಬಿರುವ ನಮ್ಮ ಕುಟುಂಬಕ್ಕೂ ನ್ಯಾಯ ಸೀಗುವಂತೆ ನಾವು ಗಮನ ಹರಿಸಬೇಕು. ಸೇವಾ ನಿವೃತ್ತಿ ನಂತರ ನಮ್ಮ ಯೋಗಕ್ಷೇಮ ನೋಡಿಕೊಳ್ಳುವವರು ನಮ್ಮ ಕುಟುಂಬದವರು. ಆದ್ದರಿಂದ ಅವರಿಗೂ ಗಮನ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಎಂ.ಬ್ಯಾಕೋಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಕಲ್ಯಾಣ ನಿಧಿಯ ವರದಿ ವಾಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್.ವ್ಹಿ.ಬರಮನಿ ವಂದಿಸಿದರು. ಕೆ.ಎಸ್.ಐ.ಎಪ್.ಸಿ. ಕಮಾಂಡೆಂಟ್ ಗಣೇಶ ಹಾಗೂ ಉಪ ಪೊಲೀಸ್ ಅಧೀಕ್ಷಕ ಎಸ್.ಎಂ.ನಾಗರಾಜ ಅವರು ವೇದಿಕೆಯಲ್ಲಿದ್ದರು.
ಜಿಲ್ಲಾ ಮೀಸಲು ಪೊಲೀಸ್ ಪಡೆಯ ಎ.ಆರ್.ಎಸ್.ಐ ಗಳಾದ ಎ.ಎಫ್.ಜಿಲ್ಲೇನವರ ಹಾಗೂ ವೈ.ಎಂ.ದಿಡ್ಡಮನಿ ಅವರು ಕಾರ್ಯಕ್ರಮ ನಿರೂಪಿಸಿದರು.
ತಂಡಗಳ ಪರಿವೀಕ್ಷಣೆ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಲೋಕಾಯುಕ್ತ ಎಸ್.ಪಿ.ಶಂಕರ ರಾಗಿ ಅವರು ಪರೇಡ್ ಕಮಾಂಡರ್ ಎಫ್.ಆರ್.ಡೊಕ್ಕಣ್ಣವರ ಸಹಾಯದಲ್ಲಿ ತೆರೆದ ಜೀಪ್‍ದಲ್ಲಿ ವಿವಿಧ ಪರೇಡ್ ತಂಡಗಳ ವಿಕ್ಷಣೆ ಮಾಡಿ, ಗೌರವ ಸ್ವಿಕರಿಸಿದರು.
ಪೊಲೀಸ್ ಪಥಸಂಚಲನ: ಪರೇಡ್ ಕಮಾಂಡರ್ ಗಳಾದ ಎಫ್.ಆರ್.ಡೊಕ್ಕಣ್ಣವರ ಹಾಗೂ ಆರ್.ಎಸ್.ಗುಡನಟ್ಟಿ ಅವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳಾದ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಆರ್.ಎಸ್.ಐ. ಸತೀಶ ಠಕ್ಕಳಕಿ, ಮಂಜುನಾಥ ಕುರಗೋಡ, ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಬಸನಗೌಡ ಬಿ.ಎಂ., ಜಿಲ್ಲಾ ನಿಯಂತ್ರಣ (ನಿಸ್ತಂತು) ಕೊಠಡಿಯ ಪಿ.ಎಸ್.ಐ ಉಮೇಶ ಕಮತಿ, ಗುಡಗೇರಿ ಪೊಲೀಸ್ ಠಾಣೆಯ ಪಿಎಸ್‍ಐ ಮಂಜುಳಾ ಸದಾರಿಯವರ ಮತ್ತು ಆರ್.ಎಸ್.ಐ ಕೆ.ಎಫ್.ಹದ್ದಣ್ಣವರ ಆಕರ್ಷಕವಾದ ನಿಧಾನಗತಿಯ ಮತ್ತು ತ್ವರೀತಗತಿಯ ಪಥ ಸಂಚಲನದ ಮೂಲಕ ಗೌರವ ಸಲ್ಲಿಸಿದರು.
ಜಿಲ್ಲಾ ಮೀಸಲು ಪೋಲೀಸ್ ಪಡೆಯ ಎ.ಆರ್.ಎಸ್.ಐ. ವೈ.ಎಫ್.ಭಜಂತ್ರಿ ಅವರ ನೇತೃತ್ವದ ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡ ಸ್ಟಿಕ್ ಮೇಜರ್ ಸಾಗರ ಬಸರಕೊಡಿ ಅವರ ಸಹಾಯದಲ್ಲಿ ಬ್ಯಾಂಡ್ ನುಡಿಸಿದರು.
ಪೊಲೀಸ್ ಅಧಿಕಾರಿ ಜಿ.ಎಲ್.ಜುಂಜೂರಿ ಅವರ ಬೆಂಗಾವಲಿನಲ್ಲಿ ವ್ಹಿ.ಡಿ.ಕುರಗೋವಿನಕೊಪ್ಪ ಅವರು ರಾಷ್ಟ್ರಧ್ವಜವನ್ನು ಮತ್ತು ಎಸ್.ಆರ್.ಕರಿಕಟ್ಟಿ ಅವರು ಪೊಲೀಸ್ ಧ್ವಜದೊಂದಿಗೆ ಆಗಮಿಸಿದ್ದರು, ಧ್ವಜಗಳಿಗೆ ಗೌರವ ಸಲ್ಲಿಸಲಾಯಿತು.
ಸೇವಾ ನಿವೃತ್ತರಿಗೆ ಗೌರವ ಸಮರ್ಪಣೆ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿ ಎಚ್.ಜಿ.ತಳವಾರ, ಎನ್.ವೈ.ಗೊಂದಳಿ, ಎ.ಜಿ.ಹವಗಿ, ಕೆ.ಎಚ್.ಕರ್ಜಗಿ, ಎಸ್.ಕೆ. ನಾಗನಗೌಡರ, ಆರ್.ಜೆ.ಪಂಗಳೇರ, ಎಲ್.ಎಸ್.ಮುತ್ತಿನ, ಎ.ಎಂ.ಅಂಬಿಗೇರ, ಆರ್.ಎನ್.ಗೋರಗುದ್ದಿ, ವ್ಹಿ.ಎಸ್. ಬೆಳಗಾಂಕರ, ಚಾಮುಂಡೇಶ್ವರಿ, ಎಂ.ಎಸ್.ಅಂಚಿ, ಎಂ.ಎ.ಗೋಲಂದಾಜ, ಬಿ.ಎಸ್.ಹುಬ್ಬಳ್ಳಿ ಮತ್ತು ಬಿ.ಎಂ. ಮಡಿವಾಳರ ಅವರನ್ನು ಮುಖ್ಯ ಅತಿಥಿಗಳೊಂದಿಗೆ ಎಸ್.ಪಿ. ಡಾ.ಗೋಪಾಲ ಬ್ಯಾಕೋಡ, ಎಎಸ್ ಪಿ ಎನ್.ವ್ಹಿ.ಬರಮಣಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿ, ಸಿಬ್ಬಂದಿ, ಎಸ್.ಪಿ.ಕಚೇರಿಯ ಅಧಿಕಾರಿ ಸಿಬ್ಬಂದಿ, ನಿವೃತ್ತ ಪೊಲೀಸ್ ಅಧಿಕಾರಿಗಳು, ಪೊಲೀಸ್ ಕುಟುಂಬಗಳ ಸದಸ್ಯರು ಸಾರ್ವಜನಿಕರು ಹಾಜರಿದ್ದರು.




