ವಿದ್ಯೆ ಸರಸ್ವತಿಯಂತೆ ಅದಕ್ಕೆ ಗೌರವ ನೀಡಿದರೆ ಶಿಕ್ಷಣದಲ್ಲಿ ಸಾಧನೆ ಸಾಧ್ಯ

3 years ago

ಬೆಂಗಳೂರು: ಹೊಂಬೇಗೌಡನಗರದಲ್ಲಿ ಸ್ಲಂ ಸಂಸ್ಥೆ ಮತ್ತು ಗರುಡ ಫೌಂಡೇಷನ್ ಸಹಯೋಗದಲ್ಲಿ ಮಾರುತಿ ವಿದ್ಯಾ ಮಂದಿರ ಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಜ್ಞಾನ, ಗಣಿತ, ಸಮಾಜಶಾಸ್ತ್ರದ ವಿಷಯಗಳಲ್ಲಿ ಉಚಿತವಾಗಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ತಜ್ಞರು, ಪಾಂಡಿತ್ಯವಿರುವ ಶಿಕ್ಷಕರಿಂದ ಉಚಿತ ಟ್ಯೂಷನ್ ತರಗತಿ ಕೇಂದ್ರ ಉದ್ಘಾಟನೆ ನೆರವೇರಿತು.

ಜಯನಗರ ಶಿಕ್ಷಣ ಸಮಿತಿಯ ಅಧ್ಯಕ್ಷ ಸಮೀರ್ ಸಿಂಹ ಮಾತನಾಡಿ, ಮಕ್ಕಳ ಮನಸ್ಸು ತುಂಬಾ ಮೃದು, ಅವರ ಜ್ಞಾಪಕಶಕ್ತಿ ಹೆಚ್ಚಿಸಲು ಟ್ಯೂಷನ್ ಬಹಳ ಉಪಯೋಗ. ಜಯನಗರದಲ್ಲಿ ಶೈಕ್ಷಣಿಕ ಸಂಸ್ಥೆಯ 30ಕ್ಕೂ ಶಿಕ್ಷಕರಿಂದ ಮಕ್ಕಳಿಗೆ ಟ್ಯೂಷನ್ ತರಬೇತಿ ನೀಡಲಾಯಿತು. ಅದರ ಶ್ರಮದಿಂದ ಪರೀಕ್ಷೆಯಲ್ಲಿ ಮಕ್ಕಳು ಉತ್ತಮ ಅಂಕಗಳಿಸಲು ಸಾಧ್ಯವಾಯಿತು. ವಿದ್ಯೆ ಸರಸ್ವತಿಯಂತೆ ಅದಕ್ಕೆ ಗೌರವ ನೀಡಿದರೆ ನೀವು ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಸ್ಲಂ ಸಂಸ್ಥೆಯ ಟ್ರಸ್ಟಿ ಭಾಗ್ಯವತಿ ಅಮರೇಶ್ ಮಾತನಾಡಿ, ಶಿಕ್ಷಣವು ಉತ್ತಮ ಸಮಾಜವನ್ನು ಸೃಷ್ಟಿಸುತ್ತದೆ. ವಿದ್ಯಾವಂತರು ಉತ್ತಮ ನೈತಿಕ ಮೌಲ್ಯಗಳು ಜೀವನದಲ್ಲಿ ಆಳವಡಿಕೊಂಡಿರುತ್ತಾರೆ. ಶ್ರೀಮಂತರ ಕುಟುಂಬದ ಮಕ್ಕಳಿಗೆ ಉತ್ತಮ ಶಾಲೆ, ಪುಸ್ತಕ ಮತ್ತು ಸಮವಸ್ತ್ರ ಎಲ್ಲವು ಆರಾಮವಾಗಿ ಸಿಗುತ್ತದೆ. ಬಡವರು, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಶಿಕ್ಷಣ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಸಾಧ್ಯವಿಲ್ಲ ಎಂದರು.

ಪ್ರತಿಭಾವಂತ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸ್ಲಂ ಸಂಸ್ಥೆ ಮತ್ತು ಗರುಡಾ ಫೌಂಡೇಷನ್ ಸಹಯೋಗದಲ್ಲಿ ಉನ್ನತ ಶಿಕ್ಷಣ, ತಂತ್ರಜ್ಞಾನ ಅಭ್ಯಾಸ ಮಾಡಲು 30 ಲ್ಯಾಪ್ ಟಾಪ್ ವಿತರಿಸಲಾಗಿದೆ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡಲಾಗಿದೆ. 10ಕ್ಕೂ ಹೆಚ್ಚು ಇಂಜಿನಿಯರ್ ವಿದ್ಯಾರ್ಥಿ ವೇತನ ನೀಡಿ, ಅವರು ಇಂದು ಇಂಜಿನಿಯರ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಟ್ಯಾಬ್ ವಿತರಿಸಲಾಗಿದೆ ಎಂದರು.

ಮಕ್ಕಳ ಶಿಕ್ಷಣದಲ್ಲಿ 10ನೇ ತರಗತಿ ಜೀವನದ ಬದಲಾವಣೆ ಸಮಯ ಸರಿಯಾದ ಶಿಕ್ಷಣ, ಗುರುಗಳ ಮಾರ್ಗದರ್ಶನ ಲಭಿಸಿದರೆ ಉತ್ತಮ ಪ್ರಜೆಗಳಾಗಿ ಬದುಕಲು ಸಾಧ್ಯವಾಗುತ್ತದೆ. ಅದರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯೂಶನ್ ತರಗತಿ ಇಂದಿನಿಂದ ಆರಂಭವಾಗಿದೆ ಎಂದರು.

ಒತ್ತಡ ನಿವಾರಣೆ, ಪರೀಕ್ಷೆ ಬಗ್ಗೆ ಪೂರ್ವ ಸಿದ್ಧತೆ ಮತ್ತು ಉತ್ತರ ಪತ್ರಿಕೆ ಪ್ರಶ್ನೆಗಳ ಉತ್ತರಿಸಬೇಕಾದ ಜಾಣ್ಮೆಯನ್ನು ಹೇಳಿಕೊಡಲಾಗುತ್ತದೆ. ವಿದ್ಯಾವಂತ ಸಮಾಜ, ದೇಶಕ್ಕೆ ಗೌರವ ಎಂದರು.

ಬಿಬಿಎಂಪಿ ಮಾಜಿ ಸದಸ್ಯ ಜಗದೀಶ್ ರೆಡ್ಡಿ, ವಿ.ಮಂಜುನಾಥ್, ಸ್ಲಂ ಸಂಸ್ಥೆ ಮ್ಯಾನೇಜಿಂಗ್ ಟ್ರಸ್ಟಿ ಅಮರೇಶ್(ಅಂಬರೀಶ್), ರಮೇಶ್ ರಾಜು, ಜಯನಗರ ಶೈಕ್ಷಣಿಕ ಸಮಿತಿಯ ಕಾರ್ಯದರ್ಶಿ ಅಮೃತ್ ಸಾಗರ್ ಪವಾರ್, ಬಿ.ಜೆ.ಪಿ. ವಾರ್ಡ್ ಅಧ್ಯಕ್ಷ ಅಜಿತ್, ರೈತ ಮೋರ್ಚಾ ಅಧ್ಯಕ್ಷ ಶಂಕರ್, ವಾರ್ಡ್ ಪ್ರಧಾನ ಕಾರ್ಯದರ್ಶಿ ರೇವಣ್ಣ ಸಿದ್ದಪ್ಪ, ವಾರ್ಡ್ ಎ.ಸಿ. ಮೋರ್ಚಾ ಅಧ್ಯಕ್ಷ ಸುರೇಶ್, ವಾರ್ಡ್ ಕಾರ್ಯಕಾರಿಣಿ ಸದಸ್ಯ ಪ್ರಜ್ವಲ್, ದಕ್ಷಿಣ ಜಿಲ್ಲಾ ಪ್ರಕೋಷ್ಟದ ಸಹ ಸಂಚಾಲಕರಾದ ರಾಜು ಮೊದಲಾದವರು ಭಾಗವಹಿಸಿದ್ದರು.

Leave a Reply