ಬೆಂಗಳೂರು: ಪೇಸಿಎಂ ಅಭಿಯಾನ ಮಾದರಿಯಲ್ಲಿ ಆಪ್ ಕೂಡ ಕ್ಯೂಆರ್ ಕೋಡ್ ಮಾದರಿಯ ಪೋಸ್ಟರ್ ತಯಾರಿಸಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವಿರುದ್ಧ ಅಭಿಯಾನಕ್ಕೆ ಚಾಲನೆ ನೀಡಿದೆ.
ಸಿಎಂ ಬಸವರಾಜ ಬೊಮ್ಮಾಯಿಯವರಿದ್ದ “ಪೇಸಿಎಂ” ಕ್ಯೂಆರ್ ಕೋಡ್ ಹಾಗೂ ಬಿಜೆಪಿಯವರು ಬಿಡುಗಡೆ ಮಾಡಿದ್ದ “ಪೇ ಎಕ್ಸ್ ಸಿಎಂ” ಕ್ಯೂಆರ್ ಕೋಡ್ ಮತ್ತು ಜೆಡಿಎಸ್ ಚಿಹ್ನೆ ಒಳಗೊಂಡ ಚಿತ್ರವನ್ನು ಅನಾವರಣ ಮಾಡಿದೆ.
ಇದು PayCm, PayExCM ಅಲ್ಲ, ಇದು PayTeam. ಜೆಡಿಎಸ್ 10%, ಕಾಂಗ್ರೆಸ್ 20% ಹಾಗೂ ಬಿಜೆಪಿ 40% ಲೂಟಿ ಮಾಡಿದೆ. ಮೂರೂ ಪಕ್ಷಗಳ ಟೀಂ ರಾಜ್ಯವನ್ನು ಲೂಟಿ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಉಳಿದಿದ್ದು ಮೂರು ನಾಮ ಎಂದು ಆಪ್ ಆರೋಪಿಸಿದೆ.



