ದೇಶ ಭಕ್ತರ ಗಮನಕ್ಕೆ…!

3 years ago

ದೇಶ ಭಕ್ತರ ಗಮನಕ್ಕೆ…!

ಇವರ ಹೆಸರು ಜವಹರಲಾಲ್ ನೆಹರೂ. ಇವರ ಪ್ರತಿಭೆ ಮತ್ತು ವಿದ್ವತ್ ಹಾಗೂ ಕಾಶ್ಮೀರಿ ಮೂಲದ ಪಂಡಿತ್ ಸಮುದಾಯವಾದುದರಿಂದ ಇವರನ್ನು ಪಂಡಿತ್ ಜವಹರಲಾಲ್ ನೆಹರೂ ಎಂದು ದೇಶದ ಜನತೆ ಪ್ರೀತಿ ಮತ್ತು ಗೌರವದಿಂದ ಕರೆಯುತ್ತಿದ್ದರು.

1889 ರಲ್ಲಿ ಜನಿಸಿದ ಇವರು ಅಲಹಬಾದ್ ವಿಶ್ವ ವಿದ್ಯಾನಿಲಯದಿಂದ ಪದವಿ ಹಾಗೂ ಲಂಡನ್ ನಗರದಲ್ಲಿ ಬ್ಯಾರಿಸ್ಟರ್ ಆಫ್ ಲಾ ಪದವಿಯನ್ನು ಪಡೆದವರು. ( ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜ್ ಆಫ್ ಕೋರ್ಟ್) ಇವರು ತಮ್ಮ ಪದವಿ ಪತ್ರಗಳನ್ನು ಸಾರ್ವಜನಿಕರಿಗೆ ಸಿಗದಂತೆ ಎಂದಿಗೂ ಮುಚ್ಚಿಡಲಿಲ್ಲ. ಹದಿನೇಳು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸದೃಢ ಭಾರತವನ್ನು ನಿರ್ಮಾಣ ಮಾಡಿದರು.

1912 ರಿಂದ 1947 ರವರೆಗೆ ಸತತ 35 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಒಂಬತ್ತು ವರ್ಷಗಳ ಕಾಲ ಸೆರೆಮನೆಯಲ್ಲಿ ಕಾಲ ಕಳೆದರು. ಅವರ ಡಿಸ್ಕವರಿ ಆಪ್ ಇಂಡಿಯಾ ಎಂಬ ಕೃತಿ ಭಾರತದ ಎಲ್ಲಾ ಭಾಷೆಗಳಲ್ಲಿ ಪ್ರಕಟವಾದ ಹಾಗೂ ಭಾರತದ ಇತಿಹಾಸವನ್ನು ಕಟ್ಟಿಕೊಡುವ ಶ್ರೇಷ್ಠ ಕೃತಿಯಾಗಿದೆ. ಅವರ ಓದಿನ ಅರಿವು ಈ ಕೃತಿಯಿಂದ ನಮಗೆ ಮನದಟ್ಟಾಗುತ್ತದೆ. ಜೊತೆಗೆ ತಮ್ಮ ಪುತ್ರಿ ಇಂದಿರಾ ಗಾಂಧೀಯವರಿಗೆ ಸೆರೆಮನೆಯಿಂದ ಬರೆದ ಪತ್ರಗಳು ‘ ಲೆಟರ್ಸ್ ಪ್ರಂ ಎ ಪಾದರ್ ಟು ಹಿಸ್ ಡಾಟರ್’ ಎಂಬ ಕೃತಿ ಕೂಡ ಅತ್ಯಮೂಲ್ಯ ಕೃತಿಯಾಗಿದೆ.

ಹಸಿವು, ಬಡತನ, ಅನಕ್ಷರತೆಯಿಂದ ಬಳಲುತ್ತಿದ್ದ ಸ್ವಾತಂತ್ರ್ಯಾನಂತರದ ಭಾರತವನ್ನು ಆಧುನಿಕ ಭಾರತವನ್ನಾಗಿ ರೂಪಿಸಿದ ಮಹಾನ್ ಮೇಧಾವಿ ಇವರು. ಅಣೆಕಟ್ಟುಗಳು, ಮಧ್ಯಮ ಮತ್ತು ಭಾರಿ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಗಾಂಧೀಜಿಯವರ ಅನುಯಾಯಿಗಳಾದ ವಿನೋಭಾ ಭಾವೆ, ಜೆ.ಸಿ.ಕುಮಾರಪ್ಪ. ಲೋಹಿಯಾ ಮುಂತಾದವರ ವಿರೋಧ ಕಟ್ಟಿಕೊಂಡರು. ಆದರೂ ಸಹ ಅವರ ಸಲಹೆ ಪಡೆಯುತ್ತಾ ಅವರ ಸೂಚನೆಯ ಗ್ರಾಮ ಭಾರತವನ್ನು ಸದೃಢಪಡಿಸಿದರು.

ತಮ್ಮ ಕಡು ವಿರೋಧಿಯಾಗಿದ್ದ ಲೋಹಿಯಾ ಅವರ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳುವುದರ ಜೊತೆಗೆ ತಮ್ಮ ಲೇಖನಗಳನ್ನು ಅವರಿಗೆ ಕಳುಹಿಸಿ, ಅಭಿಪ್ರಾಯ ಪಡೆಯುತ್ತಿದ್ದರು. ಕೃತಿಗಳಿಗೆ ಮುನ್ನಡಿ ಬರೆಯುವುದಕ್ಕೆ, ಕೃತಿ ಬಿಡುಗಡೆಗೆ ಲೋಹಿಯಾ ಅವರನ್ನು ಆಹ್ವಾನಿಸುವ ಸಜ್ಜನಿಕೆಯನ್ನು ಉಳಿಸಿಕೊಂಡು ಪೊಲಿಟಿಕಲ್ ಜಂಟ್ಲ್ ಮನ್ ಎನಿಸಿಕೊಂಡಿದ್ದರು.

ಸಾರ್ವಜನಿಕ ಉದ್ದಿಮೆಗಳು ಮತ್ತು ಸಂಸ್ಥೆಗಳು ಎಂದು ಕರೆಯಲಾಗುವ ಹೆಚ್.ಎ.ಎಲ್. ಐ.ಟಿ.ಐ, ಇಂಡಿಯನ್ ರೈಲ್ವೆ, ಎಲ್ ಐಸಿ. ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್, ಆಲ್ ಇಂಡಿಯಾ ಮೆಡಿಕಲ್ ಸೈನ್ಸ್ ಹೀಗೆ ನೂರಾರು ಸಂಸ್ಥೆಗಳನ್ನು ಹುಟ್ಟು ಹಾಕಿದರು. ಅವರ ಅವಧಿಯಲ್ಲಿ ಒಂದೇ ಒಂದು ಉದ್ದಿಮೆ ಅಥವಾ ಸಂಸ್ಥೆಯನ್ನು ಮಾರಾಟ ಮಾಡಲಿಲ್ಲ. ಹದಿನಾರು ವರ್ಷದ ಇಪ್ಪತ್ತೆಂಟು ದಿನಗಳ ಅವಧಿಯಲ್ಲಿ ಅವರ ಮಾಡಿದ ಸಾಲ ಒಂದು ಲಕ್ಷ ಕೋಟಿಯನ್ನು ದಾಟಿರಲಿಲ್ಲ.

ಈಗ ಎಂಟು ವರ್ಷದ ಅವಧಿಗೆ ನೂರು ಲಕ್ಷ ಕೋಟಿ ರೂಪಾಯಿನಷ್ಟು ಸಾಲ ಎತ್ತುವುದರ ಜೊತೆಗೆ ಒಂದೇ ಒಂದು ಸಾರ್ವಜನಿಕ ಉದ್ದಿಮೆ ಸ್ಥಾಪಿಸಲಾರದ ಮಂದಿ ಈಗ ನೆಹರೂ ದೇಶದ ಆಸ್ತಿಯಾಗಿ ಬಿಟ್ಟು ಹೋಗಿದ್ದ ಸಂಸ್ಥೆಗಳನ್ನು ಮಾರಾಟ ಮಾಡಿ ಅಧಿಕಾರ ನಡೆಸುತ್ತಿದ್ದಾರೆ. ಆದರೂ ಸಹ ನೆಹರೂ ಬಗ್ಗೆ ಮಾತನಾಡುತ್ತಾರೆ..

ನೆಹರೂ ಎಂದಿಗೂ ರೈಲ್ವೆ ನಿಲ್ದಾಣವೇ ಇಲ್ಲದ ಊರಿನಲ್ಲಿ ಚಹಾ ಮಾರಾಟ ಮಡಲಿಲ್ಲ. ಎಸ್.ಎಸ್.ಎಲ್.ಸಿ. ಕೇಂದ್ರವೇ ಇರದ ಊರಿನಲ್ಲಿ ಪರೀಕ್ಷೆ ಬರೆಯಲಿಲ್ಲ. ಹೇಳದೆ, ಕೇಳದೆ ಕಟ್ಟಿಕೊಂಡ ಪತ್ನಿಯನ್ನು ಬಿಟ್ಟು ಓಡಿ ಹೋಗಲಿಲ್ಲ. ಅವರ ಪತ್ನಿ ಕಮಲಾ ಅವರು ಕ್ಷಯ ರೋಗದಿಂದ ಮೃತಪಟ್ಟರು. ಆ ಕಾಲದಲ್ಲಿ ಅವರಿಗೆ ಇಂಗ್ಲೇಂಡ್ ಮತ್ತು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ವಿಶ್ವ ವಿದ್ಯಾನಿಲಯದ ಮುಖ ನೋಡದೆ, ಹಾಜರಾಗದೆ ಡೂಪ್ಲಿಕೇಟ್ ಪದವಿಯನ್ನು ಅವರು ಪಡೆದಿರಲಿಲ್ಲ. ಮಾಹಿತಿ ಹಕ್ಕಿನ ಅಡಿಯಲ್ಲಿ ಪದವಿ ಪತ್ರ ಮತ್ತು ಅಂಕಪಟ್ಟಿ ಸಿಗದಂತೆ ಅವರು ಎಂದಿಗೂ ಕಾನೂನು ಜಾರಿ ಮಾಡಿರಲಿಲ್ಲ.

ಅಯ್ಯಾ ದೇಶಭಕ್ತರೇ, ಹೊಟ್ಟೆಗೆ ಅನ್ನ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ರಯ್ಯ. ಸತ್ಯ ಮತ್ತು ಸುಳ್ಳುಗಳ ಅರಿವು ತಕ್ಷಣ ನಿಮ್ಮ ಮಿದುಳಿಗೆ ತಾಕುತ್ತದೆ. ಮಣ್ಣು ಮತ್ತು ಹೇಸಿಗೆ ತಿಂದರೆ ಮಿದುಳು ಗೆದ್ದಲು ಹಿಡಿಯುತ್ತದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply