ಬಿಬಿಸಿ ಗುಜರಾತ್ ಗಲಭೆಗಳ ಸಾಕ್ಷ್ಯಚಿತ್ರದ ಮೇಲೆ ಮೋದಿ ಸರ್ಕಾರದ ನಿಷೇಧ: ಪಿಐಎಲ್ ಆಲಿಸಲು ಸುಪ್ರೀಂ ಕೋರ್ಟ್ ಸಮ್ಮತಿ

3 years ago

ದೆಹಲಿ: ದೇಶದಲ್ಲಿ 2002ರ ಗುಜರಾತ್ ದಂಗೆಗಳ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಕೇಂದ್ರ ನಿರ್ಧಾರದ ವಿರುದ್ಧ ಫೆಬ್ರವರಿ 6ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ನೇತೃತ್ವದ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆಸುವಂತೆ ವಕೀಲ ಎಂ.ಎಲ್.ಶರ್ಮಾ ಮನವಿ ಸಲ್ಲಿಸಿದರು.

‘ಇಂಡಿಯಾ: ದಿ ಮೋದಿ ಕ್ವೆಶ್ಶನ್’ ಶೀರ್ಷಿಕೆಯ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಕೇಂದ್ರದ ನಿರ್ಧಾರವನ್ನು ವಕೀಲರು ಪ್ರಶ್ನಿಸಿದರು, ನಿಷೇಧ ಕ್ರಮ “ದುಷ್ಕೃತ್ಯ, ನಿರಂಕುಶ ಮತ್ತು ಅಸಂವಿಧಾನಿಕ” ಎಂದು ಅವರು ಆರೋಪಿಸಿದರು.

BBC ಸಾಕ್ಷ್ಯಚಿತ್ರದ ಎರಡೂ ಭಾಗಗಳನ್ನು ಪರಿಶೀಲಿಸುವಂತೆ PIL ನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಒತ್ತಾಯಿಸಲಾಗಿದೆ. 2002ರ ಗುಜರಾತ್ ಗಲಭೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ಗೆ ಮನವಿಯಲ್ಲಿ ಮಾಡಲಾಗಿದೆ. 2002ರ ಗುಜರಾತ್ ಗಲಭೆಯ ಸುದ್ದಿ, ಸತ್ಯ ಮತ್ತು ವರದಿಗಳನ್ನು ನೋಡಲು ಪರಿಚ್ಛೇದ 19 (1) (2) ರ ಅಡಿಯಲ್ಲಿ ನಾಗರಿಕರಿಗೆ ಹಕ್ಕಿದೆಯೇ ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಬೇಕು ಎಂದು ವಕೀಲರು ಮನವಿ ಮಾಡಿಕೊಂಡಿದ್ದಾರೆ.

ಇದಕ್ಕೂ ಮುನ್ನ ಜನವರಿ 21 ರಂದು, ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್ಗಳನ್ನು ಹಂಚಿಕೊಳ್ಳುವ ಯೂಟ್ಯೂಬ್ ವೀಡಿಯೊಗಳು ಮತ್ತು ಟ್ವಿಟರ್ ಪೋಸ್ಟ್ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಾಕ್ಷ್ಯಚಿತ್ರವನ್ನು “ಪ್ರಚಾರದ ತುಣುಕು” ಎಂದು ಕಸದ ಬುಟ್ಟಿಗೆ ಹಾಕಿದೆ ಅದು ವಸ್ತುನಿಷ್ಠತೆಯ ಕೊರತೆ ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಕ್ರಿಯಿಸಿತ್ತು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ ಜನವರಿ 21 ರ ಆದೇಶವನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಒತ್ತಾಯಿಸಲಾಗಿದ್ದು, ಕೇಂದ್ರ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದೇ? ಎಂದು ಕೇಳಲಾಗಿದ್ದು, ಇದು ಸಂವಿಧಾನದ ಪರಿಚ್ಛೇದ 19 (1) (2) ರ ಅಡಿಯಲ್ಲಿ ಖಾತರಿಪಡಿಸುತ್ತದೆ ಎನ್ನಲಾಗಿದೆ.

ರಾಷ್ಟ್ರಪತಿಯವರಿಂದ ಭಾರತದ ಸಂವಿಧಾನದ 352ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸದೆಯೇ, ಕೇಂದ್ರ ಸರ್ಕಾರ ತುರ್ತು ನಿಬಂಧನೆಗಳನ್ನು ಅನ್ವಯಿಸಬಹುದೇ? ಎಂದು ಪಿಐಎಲ್ ನಲ್ಲಿ ಸಲಹೆ ಕೋರಲಾಗಿದೆ. ವಕೀಲರು BBC ಸಾಕ್ಷ್ಯಚಿತ್ರವು “ದಾಖಲಾದ ಸತ್ಯಗಳನ್ನು” ಹೊಂದಿದೆ ಎಂದು ಪ್ರತಿಪಾದಿಸಿದ್ದು, ಅವುಗಳು “ಸಾಕ್ಷಿ” ಮತ್ತು ನ್ಯಾಯ ಹಂಚಿಕೆಯ ಕಾರಣವನ್ನು ಹೆಚ್ಚಿಸಲು ಬಳಸಬಹುದು ಎಂದು ಅಭಿಪ್ರಾಯಪಡಲಾಗಿದೆ.

Leave a Reply