ರಾಹುಲ್ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟನೆ

3 years ago

ಬೆಳಗಾವಿ: ಬೆಳಗಾವಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಮಚ್ಚೆ ಗ್ರಾಮದ ಹುಂಚಾನಟ್ಟಿ ರಸ್ತೆಯಲ್ಲಿರುವ ಮೈದಾನದಲ್ಲಿ ರಾಹುಲ್ ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಸತೀಶ್ ಜಾರಕಿಹೊಳಿಯವರು ಮನಸ್ಸು ಮಾಡಿದ್ದರೆ ಬೇರೆ ರಾಜಕಾರಣಿಗಳ ಮಕ್ಕಳಂತೆ ತಮ್ಮ ಮಕ್ಕಳನ್ನು ಅವರ ಈ ಯವ್ವನಾವಸ್ಥೆಯಲ್ಲಿ ವಿದೇಶದಲ್ಲಿ ಶಿಕ್ಷಣಕ್ಕೋ, ಮೋಜು ಮಸ್ತಿಗೋ ಬಿಟ್ಟು ಬಿಡಬಹುದಿತ್ತು. ಇಲ್ಲವೇ ಮೆರಿಟ್ ವಿದ್ಯಾರ್ಥಿಗಳಾದ ತಮ್ಮ ಮಕ್ಕಳನ್ನು ತಾವು ಇಚ್ಛಿಸುವ ಸರಕಾರಿ ಉನ್ನತ ಹುದ್ದೆಗೆ ಸೇರಲು ಅವಕಾಶ ಮಾಡಿ ಕೊಡಬಹುದಿತ್ತು. ಆದರೆ ತಾವು ಪಡೆದ ಶಿಕ್ಷಣ ನಾಲ್ಕು ಜನಕ್ಕೆ ಸೇವೆ ಮಾಡಲು ಮೀಸಲಿಟ್ಟು, ಸದಾ ಜನರ ನಡುವೆ ಇದ್ದು ಇನ್ನುಳಿದ ಜೀವನ ಪಾಠ ಕಲಿಯಲು ಅವರಿಗೆ ಪ್ರೋತ್ಸಾಹಿಸುತ್ತಿದ್ದಾರೆ. ದೇಶದ ಮಹನೀಯರ ಆದರ್ಶಗಳ ಜೊತೆಗೂಡಿ ಬದುಕುವ ಜೊತೆಗೆ ಇತರರಿಗೂ ಮಾರ್ಗದರ್ಶನ ಕೊಡಲು ಇಂತಹ ಬಳಗಗಳಿಗೆ ಸಹೋದರ ರಾಹುಲ್ ಅವರು ಸಹ ಉತ್ಸುಕತೆಯಿಂದ ವಿರಮಿಸದೆ ಶ್ರಮಿಸುತ್ತಿರುವುದು ಸಂತಸದ ವಿಷಯ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವನಾಯಕ ರಾಹುಲ್ ಜಾರಕಿಹೊಳಿ, ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಲು ಕಾರ್ಯಕರ್ತರು ಸಿಂಹ ಹೃದಯ ತಾಳಬೇಕು. ಬಳಗದ ವತಿಯಿಂದ ನಡೆಯುವ ಯುವಕರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ತಿಳಿಸಿದರು .

ದೇಶದ ಮಹನೀಯರ ಹಾದಿಯಲ್ಲಿ ನಡೆದು ಅವರು ಕಂಡ ಸಮ ಸಮಾಜದ ಆಶಯಗಳನ್ನು ಈಡೇರಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಯುವಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಬೇಕು. ಇದಕ್ಕಾಗಿ ಸಮಾಜ ಸೇವೆಗಾಗಿಯೇ ಸಮರ್ಪಣೆ ಮಾಡಿರುವ ತಮ್ಮ ಪುತ್ರ ರಾಹುಲ್ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಕರೆನೀಡಿದರು.

– ಸರಳಾ ಸಾತ್ಪುತೆ, ಸಾಮಾಜಿಕ ಹೋರಾಟಗಾರರು

Leave a Reply