ಕೊರೊನಾ ರೋಗಿಗಳಿಗೆ ಉಚಿತ ಆಂಬುಲೆನ್ಸ್ ಗೆ ಮನವಿ: ನಳಿನ್ ಕಟೀಲ್

5 years ago

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕಟೀಲ್ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರನ್ನು ಅವರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭೇಟಿಯಾದ ನಳಿನ್ ಕಟೀಲ್, ರಾಜ್ಯದ ಕೋವಿಡ್ ಸ್ಥಿತಿಗಳ ಕುರಿತು ಚರ್ಚಿಸಿದರು. ಜೊತೆಗೆ, ಬಿಜೆಪಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಕೋವಿಡ್ ನೆರವಿನ ‘ಸೇವೆಯೇ ಸಂಘಟನೆ – 2.0’ ಪರಿಹಾರ ಕಾರ್ಯಗಳ ವಿವರಗಳ ಮಾಹಿತಿ ನೀಡಿದರು.

Leave a Reply