ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ, ಕಮಲಾ ನಗರದಲ್ಲಿರುವ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಸ್ಥಳೀಯ ನಾಯಕ ಎಮ್.ಶಿವರಾಜು, ಗಂಗಾಧರೇಶ್ವರ ಪ್ರಾಥಮಿಕ ಮತ್ತು ಫ್ರೌಡಶಾಲೆಯ 500ಕ್ಕೂ ಹೆಚ್ಚು ಮಕ್ಕಳಿಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ನಟಿಸಿದ ಗಂಧದಗುಡಿ ಚಲನಚಿತ್ರವನ್ನು ಮಕ್ಕಳಿಗೆ ಉಚಿತವಾಗಿ ಪ್ರದರ್ಶನ ಏರ್ಪಡಿಸಿದ್ದರು.
ಮಾಜಿ ಬಿ.ಬಿ.ಎಂ.ಪಿ.ಸದಸ್ಯ ಎಸ್.ಕೇಶವಮೂರ್ತಿ, ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಶಾಲಕ್ಷ್ಮೀ ಶಿವರಾಜು, ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಚೇತನಾ ಕೇಶವಮೂರ್ತಿರವರು ಭಾಗವಹಿಸಿದ್ದರು.
ಇದೇ ವೇಳೆ ಎಮ್.ಶಿವರಾಜು ಮಾತನಾಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಟಿಸಿದ ಎಲ್ಲ ಚಲನಚಿತ್ರಗಳು ಸಮಾಜಕ್ಕೆ ಮಾದರಿಯಾದ ಚಿತ್ರಗಳು. ಪರಿಸರ ನಾಶ, ಮನುಕುಲದ ನಾಶ ಎಂಬ ಅರಿವು ಮೂಡಿಸಲು ಮತ್ತು ಕರ್ನಾಟಕದಲ್ಲಿ ಪರಿಸರ ಸೌಂದರ್ಯದ ಕಾಡುಗಳ ನೈಜ ಚಿತ್ರಣವಿರುವುದು ಮಕ್ಕಳು ವೀಕ್ಷಣೆ ಮಾಡಿದಾಗ ಅವರಿಗೂ ಸಹ ಪರಿಸರ ಜಾಗೃತಿ ಮೂಡುತ್ತದೆ ಎಂದರು.
ಗಂಧದಗುಡಿ ಚಲನಚಿತ್ರ ಎಲ್ಲರಿಗೂ ಪರಿಸರ ರಕ್ಷಣೆಗೆ ಪ್ರೇರಣೆಯಾಗಿದೆ. ಪರಿಸರ ಉಳಿದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಜೀವನ ಸಾಗಿಸಬಹುದು. ಇನ್ನಾದರು ಎಲ್ಲರು ಪರಿಸರ ಉಳಿಸಲು ಪ್ರತಿ ಮನೆ ಮುಂದೆ ಸಸಿ ನೆಡುವುದು ಮತ್ತು ಸ್ವಚ್ಛತೆ ಕಾಪಾಡುವುದು ಮಾಡಬೇಕು ಎಂದು ಹೇಳಿದರು.




