ಪುಸ್ತಕ ಅಚ್ಚಾಗಿ ಬಂದ ಮೊದಲ ದಿನವೇ..
ಭಾರತದ ಮೊದಲ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಬಗೆಗಿನ ಜೀವನ ಮತ್ತು ಸಾಧನೆಗಳ ಪುಸ್ತಕ *”ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ”* (ಲೇ: ಡಾ. ಎಚ್ ಎಸ್ ಅನುಪಮಾ) ಪುಸ್ತಕದ ಹನ್ನೊಂದನೆ ಮುದ್ರಣ ಪ್ರತಿಗಳು ಅಚ್ಚಾಗಿ ಇಂದು ಕೈಸೇರಿದವು. ಮುದ್ರಣ ತುಂಬ ಚೆನ್ನಾಗಿ ಬಂದಿದೆ. ಪುಸ್ತಕ ಮುಟ್ಟಿ ಮುಟ್ಟಿ ಖುಷಿಪಟ್ಟೆ.
ಪುಸ್ತಕ ಮುದ್ರಣವಾಗಿ ಬಂದ ದಿನವೇ ಏಳು ನೂರು ಪ್ರತಿ ಮಾರಾಟ ಆಗಿದ್ದು ಹೆಚ್ಚು ಖುಷಿ ತಂದಿತು. ಇಂಡಿ ಬಿಜಾಪುರ ಜಿಲ್ಲೆಯ ಹಿಂದುಳಿದ ತಾಲೂಕು ಮತ್ತು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡ ಗಡಿ ಪ್ರದೇಶ. ಇಲ್ಲಿ ಶಿವಾನಂದ ಮೂರಮಾನ ಅವರು ಕರ್ನಾಟಕ ದಲಿತ ಸಮನ್ವಯ ಸಮಿತಿ ಎಂಬ ಸಂಘಟನೆಯ ತಾಲೂಕಾ ಸಂಚಾಲಕರಾಗಿ ದಲಿತ ಜನಗಳ ಹಿತ ಕಾಯುವ ಕೆಲಸ ಮಾಡುತ್ತಿದ್ದಾರೆ.
ಇಂಡಿ ನಗರದ ಮಕ್ಕಳಿಗೆ ಸಾವಿತ್ರಿಬಾಯಿ ಫುಲೆಯವರ ಪುಸ್ತಕ ಕೊಡಬೇಕು ಎನ್ನುವುದು ಅವರ ಕನಸಾಗಿತ್ತು. ಆ ಮೂಲಕ ದಲಿತ ಸಮುದಾಯದ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ ಮಾತೆಯನ್ನು ಸಮುದಾಯಕ್ಕೆ ಪರಿಚಯಿಸುವ ಉದ್ದೇಶದಿಂದ ನವೆಂಬರ 15 ರಂದು ಏಳುನೂರು ಜನಗಳಿಗೆ ಆ ಪುಸ್ತಕ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆವತ್ತು ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮತ್ತು ಸಿ ಇ ಓ ಪಾಲ್ಗೊಂಡಿದ್ದಾರೆ. ಶಿವಾನಂದನಂಥವರು ಜಿಲ್ಲೆಗೊಬ್ಬರು ತಾಲೂಕಿಗೊಬ್ಬರು ಇದ್ದರೆ ದಲಿತ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣದ ಅರಿವು ಮೂಡಲು ಸಾಧ್ಯವಿದೆ. ಶಿವಾನಂದನಂಥವರ ಸಂಖ್ಯೆ ಇನ್ನೂ ಹೆಚ್ಚಾಗಲಿ. ಅಕ್ಷರದವ್ವ ಮನೆಮನೆಗೆ ತಲುಪಲಿ.
– ಬಸೂ ಸೂಳಿಬಾವಿ
ಪುಸ್ತಕದ ಬೆಲೆ:ರೂ 100+20(ಅಂಚೆವೆಚ್ಚ)=120
ಈ ಪುಸ್ತಕ ಜನಗಳಿಗೆ/ವಿದ್ಯಾರ್ಥಿಗಳಿಗೆ ತಲುಪಿಸುವದಕ್ಕಾಗಿ ರಿಯಾಯಿತಿಯಲ್ಲಿ ಸಿಕ್ಕುತ್ತದೆ
5 ಪ್ರತಿಗಳಿಗೆ
5×100=500-165=335+30(ಅಂಚೆವೆಚ್ಚ)=365 ರೂ
10 ಪ್ರತಿಗಳಿಗೆ
10×100=1000-400=600+40(ಅಂಚೆವೆಚ್ಚ)=640 ರೂ
25 ಪ್ರತೆಗಳಿಗೆ
25×100=2500-1000=1500+80(ಅಂಚೆವೆಚ್ಚ)= 1580 ರೂ
***
*ಪುಸ್ತಕಕ್ಕಾಗಿ*
***
*ಲಡಾಯಿ ಪ್ರಕಾಶನ: 9480286844*
*ಉತ್ತಮ ಪುಸ್ತಕಗಳು ನಿಮ್ಮ ಓದುವ ಕೋಣೆ ಸೇರಲಿ*
Punjab national bank Gadag
A/c No 0177005500000278
Ladai prakashana
IFSC : PUNB0017700
Google pay and phone pay number : 9480286844
*ಇಷ್ಟವಾದಲ್ಲಿ ನಿಮ್ಮ ಬಳಗ/ವ್ಯಾಟ್ಸಫ್/ಟೆಲಿಗ್ರಾಮ/ ಫೇಸ್ಬುಕ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಿ*
*ವೈಚಾರಿಕ ಸಮಾಜ ಕಟ್ಟುವ ಕಾರ್ಯಗಳಲ್ಲಿ ಕೈಜೋಡಿಸಿ.. ನಿಮ್ಮ ಪುಸ್ತಕ ಪ್ರೀತಿ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೆ ತರುತ್ತದೆ*



