ಬೆಂಗಳೂರು: ಸತತ ಮಳೆಯಿಂದ ಗುಂಡಿ, ಪುಟ್ ಪಾತ್ ಮತ್ತು ರಸ್ತೆಗಳು ಮತ್ತು ಬೀದಿ ದೀಪಗಳ ಸಮಸ್ಯೆಗಳನ್ನು ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ, ತತಕ್ಷಣಕ್ಕೆ ಸಮಸ್ಯೆಗಳನ್ನು ಪರಿಹರಿಸಿ ಸಾರ್ವಜನಿಕರು, ವಾಹನ ಸವಾರರು ಮುಕ್ತವಾಗಿ ಓಡಾಡಲು ಅನುವು ಮಾಡಿಕೊಡಬೇಕು ಎಂಬ ಉದ್ದೇಶದಿಂದ ಅಧಿಕಾರಿಗಳ ಜೊತೆಗೆ ಪರಿಶೀಲನೆ ನಡೆಸಲಾಯಿತು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ, ಗುಂಡಿ ಒಳಚರಂಡಿ ಮತ್ತು ಬೀದಿ ದೀಪ ಮತ್ತು ಫುಟ್ ಪಾತ್ ಸಮಸ್ಯೆಗಳನ್ನು ನೇರವಾಗಿ ವೀಕ್ಷಣೆ ಮಾಡಿ ಪರಿಹರಿಸಲು ರಾಜಾಜಿನಗರ ಆರ್.ಟಿ.ಓ. ಕಛೇರಿಯಿಂದ ಅಧಿಕಾರಿಗಳ ತಂಡದ ಜೊತೆಯಲ್ಲಿ ರಾಜಾಜಿನಗರ, ಶಿವನಗರ, ಶ್ರೀರಾಮಮಂದಿರ ಮತ್ತು ಬಸವೇಶ್ವನಗರ, ಕಾಮಾಕ್ಷಿ ಪಾಳ್ಯ, ದಯಾನಂದನಗರ ವಾರ್ಡ್ ಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತಾಡಿದ ಅವರು, ಮಳೆ ನೀರು ತೇವಾಂಶ ಇರುವ ರಸ್ತೆಗಳಿಗೆ ಆಧುನಿಕ ತಂತ್ರಜ್ಞಾನ ಬಳಸಿ, ಗುಂಡಿ ಮುಚ್ಚುವ ತಂತ್ರಜ್ಞಾನ ಆಳವಡಿಸಿಕೊಳ್ಳಬೇಕು. ಖಾಸಗಿ ಕಂಪನಿಗಳು ಅನಧಿಕೃತವಾಗಿ ರಸ್ತೆ ಅಗೆಯುವುದಕ್ಕೆ ಕಡಿವಾಣ ಹಾಕಬೇಕು. ರಾಜಾಜಿನಗರ ವಿಧಾನಸಭಾ ಕ್ಷೇತ್ರ ಗುಂಡಿ ಮುಕ್ತ ಕ್ಷೇತ್ರವಾಗಬೇಕು. ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಲಾಗುವುದು ಎಂದರು.
ಬಿ.ಬಿ.ಎಂ.ಪಿ.ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗ, ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳು ಭಾಗವಹಿಸಿದ್ದರು.




