ಗಂಧದ ಗುಡಿ ಬೈಕ್ ರೈಡ್ ಗೆ ಚಾಲನೆ

4 years ago

ಬೆಂಗಳೂರು: ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಬಂಧವನ್ನು ಕಾರ್ಯ ಹಾಗೂ ಕಾಳಜಿಯ ಮೂಲಕ ವ್ಯಕ್ತಪಡಿಸಿರುವ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ‘ಗಂಧದಗುಡಿ’ ನಾಮಾಂಕಿತದಲ್ಲಿ ಹಮ್ಮಿಕೊಳ್ಳಲಾದ ಬೈಕ್‌ ರೈಡ್‌ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ ಅಪ್ಪು ಅವರ ಜೀವನ ಎಲ್ಲರಿಗೂ ಪ್ರೇರಣೆ.ರಾಜ್ಯದ ನೈಸರ್ಗಿಕ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವ ಜತೆಗೆ ಅವುಗಳನ್ನು ಉಳಿಸಿ, ಬೆಳೆಸುವ ಮೂಲ ಉದ್ದೇಶವನ್ನು ‘ಗಂಧದಗುಡಿ’ ಚಿತ್ರ ಹೊಂದಿದೆ ಎಂದರು.

ನೀ ಬೆಳೆಸುವ ಪ್ರತಿ ಮರದಲ್ಲೂ ನಾ ಜೀವಂತ ಎಂಬ ಘೋಷವಾಕ್ಯ ಎಲ್ಲರ ಗಮನ ಸೆಳೆಯಿತು. ಕನ್ನಡ ಬಾವುಟದ ಮಧ್ಯದಲ್ಲಿ ಪುನಿತ್ ಭಾವಚಿತ್ರ ಆಕರ್ಷಕವಾಗಿತ್ತು. ಅಶ್ವಿನಿ ಪುನಿತ್ ರಾಜ್ ಕುಮಾರ್ ಅಪ್ಪು ಭಾವಚಿತ್ರದ ಕನ್ನಡ ಬಾವುಟ ಹಿಡಿದು ಬೈಕ್ ರೈಡ್ ಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅಶ್ವಿನಿ ‌ಪುನಿತ್ ರಾಜ್ ಕುಮಾರ್, ನಿರ್ದೇಶಕ ಅಮೋಘವರ್ಷ, ಅಪ್ಪು ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಸಸಿಗಳನ್ನು ವಿತರಿಸಲಾಯಿತು.

Leave a Reply