ಜಿಗಣಿ ಅಜ್ಜಾರೆಡ್ಡಿ ಮೊಮ್ಮಗ ಕಿರಣ್ ಅವರ ನೇತ್ರದಾನ

4 years ago

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಕಿರಣ್ (25) ಅವರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಕಿರಣ್ ಅತ್ತೆ ನಿರ್ಮಲ ಅವರು ನೇತ್ರದಾನಿ ಪುನಿತ್ ನಮಗೆ ಮಾದರಿ ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ, ನಮ್ಮ ಹುಡುಗನ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸತಂದಿದೆ ಎಂದರು.

ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು, ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು, ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಎ.ಶ್ರೀಧರ್ ಅವರು ಕೋರಿದರು.

ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ವೈಕೆ ಆಸ್ಪತ್ರೆಯ ಡಾ.ಜಿ.ಕೆ.ನಾರಾಯಣ, ಅಮರನಾಥ ರೆಡ್ಡಿ, ಅಜ್ಜಾ ರೆಡ್ಡಿಕುಟುಂಬದವರು,  ಎಮ್.ಸಿ ರಾಜಪ್ಪ, ಶಿವಪ್ಪ, ಕೃಷ್ಣಾರೆಡ್ಡಿ, ಮಲ್ಲಿಗೆ ಆನಂದ್ ಹೊಸಬೆಳಕು ಟ್ರಸ್ಟಿನ ಡಾ.ಎಂ.ರಾಮಕೃಷ್ಣ.

 ನೇತ್ರದಾನ – ಅಂಗಾಂಗದಾನ – ದೇಹದಾನದ ಸಮಯದಲ್ಲಿ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.

Leave a Reply